November 4, 2025

ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಗೆ ಬ್ರೇಕ್: ಬೆಂಗಳೂರಿನಲ್ಲಿ ಫುಟ್ಪಾತ್ ವ್ಯಾಪಾರ ಸ್ಥಗಿತ: ಡಿಸಿಎಂ. ಡಿ.ಕೆ.ಶಿವಕುಮಾರ್

ಸಿಲಿಕಾನ್ ಸಿಟಿಯನ್ನು ಬ್ರಾಂಡ್‌ ಬೆಂಗಳೂರು ಮಾಡುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರವರು ಬೆಂಗಳೂರಿಗೆ ಹಲವು ಹೊಸ ರೂಲ್ಸ್‌ಗಳನ್ನು ತಂದಿದ್ದಾರೆ.

ಇನ್ಮುಂದೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸುವಂತಿಲ್ಲ. ನೋ ಪಾರ್ಕಿಂಗ್ ಇರುವ ಜಾಗದಲ್ಲಿ ವಾಹನಗಳನ್ನ ನಿಲ್ಲಿಸಿದರೆ ವಾಹನಗಳನ್ನು ವಶಕ್ಕೆ ಪಡೆದು 21 ದಿನದಲ್ಲಿ ಹರಾಜು ಮಾಡಲಾಗುತ್ತದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೂ ಕೂಡ ಹೊಸ ರೂಲ್ಸ್ ತಂದಿದ್ದಾರೆ. ಇನ್ಮುಂದೆ ಬೀದಿ ಬದಿ ವ್ಯಾಪಾರಿಗಳು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ತಳ್ಳೋಗಾಡಿಯಲ್ಲೇ ವ್ಯಪಾರ ಮಾಡಬೇಕು ಜೊತೆಗೆ ಯಾವ ಜಾಗದಲ್ಲಿ ನಿಗದಿ ಪಡಿಸಿರುತ್ತಾರೋ ಅದೇ ಜಾಗದಲ್ಲಿ ಅವರು ಮಾರಾಟವನ್ನು ಮಾಡಬೇಕಾಗುತ್ತದೆ.ಒಂದು ಕಡೆ ಪಾರ್ಕಿಂಗ್‌ ವಿಚಾರ ಒಳ್ಳೆಯದಾದರೆ, ಮತ್ತೊಂದು ಕಡೆ ಬೀದಿಬದಿಯ ವ್ಯಪಾರಿಗಳಿಗೆ ರೂಲ್ಸ್‌ ಮಾಡಿ ಡಿಕೆಶಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾಕಂದರೆ, ಎಷ್ಟೋ ಜನ ಬೀದಿಬದಿ ವ್ಯಾಪಾರಿಗಳು ಹಲವು ವರ್ಷಗಳಿಂದ ವ್ಯಾಪಾರ ಮಾಡಿ ತಮ್ಮ ಜೀವನ ಸಾಗಿಸಿರುತ್ತಾರೆ. ಇದೀಗ ಏಕಾಏಕಿ ಅಂಗಡಿ ತೆರವು ಮಾಡಿ, ಹೊಸ ರೂಲ್ಸ್ ಫಾಲೋ ಮಾಡಬೇಕಂದ್ರೆ ಸ್ವಲ್ಪ ಕಷ್ಟ ಆಗುತ್ತೆ ಅನ್ನುವುದು ಜನರ ವಾದವಾಗಿದೆ.

ಬೆಂಗಳೂರಿನ ಎಲ್ಲಾ ಫುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ. 27,665 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ನಾವು ಅವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ.

ನಾವು ನಿಗದಿ ಮಾಡುವ ಜಾಗದಲ್ಲಿ ವಾಹನ ಇಟ್ಟುಕೊಂಡು ವ್ಯಾಪಾರ ಮಾಡಬೇಕು. 3,755 ಜನ ವ್ಯಾಪಾರಿಗಳು ವಾಹನ ಬೇಕು ಎಂದು ಕೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಮೂಲಕ ಒತ್ತಡ ತರಬೇಡಿ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ಒಂದೇ ಬಾರಿಗೆ ಇದನ್ನು ತೆರವುಗೊಳಿಸಲು ಆಗದಿದ್ದರೂ, ವ್ಯವಸ್ಥಿತವಾಗಿ ಹಂತ ಹಂತವಾಗಿ ಇದನ್ನು ಸರಿಪಡಿಸಲಾಗುವುದು ಎಂದರು.

ಬೇಸ್‌ಮೆಂಟ್ ನಿಲ್ದಾಣ ದುರುಪಯೋಗದ ವಿರುದ್ಧ ಕ್ರಮ:

‘ಟೌನ್ ಪ್ಲ್ಯಾನ್ ಪ್ರಕಾರ ಬೇಸ್‌ಮೆಂಟ್‌ನಲ್ಲಿ ಅಂಗಡಿ ಅಥವಾ ಬೇರೇನೂ ಮಾಡಲಾಗದು. ಆದರೆ ಈಗಾಗಲೇ ಹಲವೆಡೆ ಪಾರ್ಕಿಂಗ್‌ಗಾಗಿ ಬೇಸ್‌ಮೆಂಟ್ ಬಳಸಲಾಗಿದೆ. ಇವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು,’ ಎಂದು ಅವರು ತಿಳಿಸಿದರು.

error: Content is protected !!