*ಹಿಂಗಾರು ಹಂಗಾಮಿನ ನವೆಂಬರ್ 4 ರಂದು ನಡೆಯುವ ಐ ಸಿ ಸಿ ಸಭೆಯಲ್ಲಿ ನಮ್ಮ ಭಾಗದ ಜನಪ್ರತಿನಿದಿಗಳು ಭಾಗಿಯಾಗಿ ಜನರ ಧ್ವನಿಯಾಗಲಿ..*
ಶಹಾಪುರ: ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದ ಹಿಂಗಾರು ಹಂಗಾಮಿನ ಪ್ರತಿ ವರ್ಷದಂತೆ ಈ ವರ್ಷವು ಕೂಡ ನವೆಂಬರ್ 4 ರಂದು ಐ ಸಿ ಸಿ ಸಭೆ ಕೆರೆದಿದ್ದು, ಎಡದಂಡೆ ಕಾಲುವೆ ಮುಂಬರುವ ಏಪ್ರಿಲ್ 10 ರ ವರಿಗೆ ಕಾಲುವೆಗೆ ನೀರು ಹರಿಸುವಂತೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು, ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ, ಯಾದಗಿರಿ ಜಿಲ್ಲೆಯ ಶಾಸಕಾರದ ಶ್ರೀ ಚನ್ನಾರೆಡ್ಡಿ ತುನ್ನೂರು, ಗುರುಮಿಠಕಲ್ ಶಾಸಕರಾದ ಶ್ರೀ ಶರಣುಗೌಡ ಕಂದಕೂರು, ಸುರುಪುರ ಶಾಸಕರಾದ ಶ್ರೀ ರಾಜ ವೇಣುಗೋಪಾಲ ನಾಯಕ, ಹಾಗೂ ಜೇವರ್ಗಿಯ ಶಾಸಕರಾದ ಶ್ರೀ ಅಜಯ್ ಸಿಂಗ್ ರವರು ಎಲ್ಲರು ಸಭೆಗೆ ಹಾಜರಾಗಿ ಹಿಂಗಾರು ಹಂಗಾಮಿಗೆ ಏಪ್ರಿಲ್ 10 ರವರಗೆ ಕಾಲುವೆಗೆ ನೀರು ಹರಿಸುವಂತೆ ಐ ಸಿ ಸಿ ಅಧ್ಯಕ್ಷರು ಹಾಗೂ ಸಚಿವ ಆರ್.ಬಿ ತಿಮ್ಮಾಪುರಿಯವರನ್ನು ಒತ್ತಾಯಿಸಬೇಕು.
ಸದ್ಯ ಮುಂಗಾರಿನ ನಮ್ಮ ಭಾಗದ ಪ್ರಮುಖ ಬೆಳೆಗಳಾದ ಹತ್ತಿ, ತೊಗರಿ, ಸಂಪೂರ್ಣವಾಗಿ ಅತೀ ಅತಿವೃಷ್ಟಿಯಿಂದ ಹಾಳಾಗಿದೆ. ಸರಕಾರದ ಕಡೆಯಿಂದ ಸಮೀಕ್ಷೆ ನಡೆದಿದೆ, ಆದರೆ ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ ಹಿಂಗಾರಿನ ಹಂಗಾಮಿಗೆ ಸೂಕ್ತವಾಗಿ ಕಾಲುವೆಗೆ ನೀರು ಹರಿಸಿದರೆ ಶೇಂಗಾ, ಜೋಳ, ಕಡಲೆ, ಇನ್ನು ಮುಂತಾದ ಬೆಳೆಗಳು ಬೆಳೆಯಬಹುದು, ಹಾಗೆ ಇನ್ನೊಂದು ಪ್ರಮುಖ ಬದಲಾವಣೆಯಂದರೆ ಕಳೆದ ವರ್ಷ 14 ದಿನ ಚಾಲುವು 10 ದಿನ ಬಂದು ಎಂಬ ಪ್ರಕ್ರಿಯೆ ಸಡಿಲಿಸಬೇಕು,
ಇದು ಹೀಗೆ ಆದರೆ ಕಾಲುವೆಯ ಕೊನೆಯ ಭಾಗಕ್ಕೆ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಗಳಲ್ಲಿ ಬಿಸಿಲು ಹೆಚ್ಚಾದರೆ ನೀರು ಮುಟ್ಟುವುದೇ ಕಷ್ಟ ಹೀಗೆ ರೈತರು ಕಷ್ಟದಲ್ಲಿ ಇದ್ದಾರೆ ಮುಂದೆ ಮತ್ತೆ ಹೀಗೆ ಆದರೆ ಬಹಳ ಕಷ್ಟಕ್ಕೆ ಒಳಗಾಗುತ್ತಾರೆ,
ಕಳೆದ ವರ್ಷ ವಡಗೇರಾ ಭಾಗದ ಅನೇಕ ಕಡೆ ನೀರೆ ಮುಟ್ಟದೆ ಆ ಭಾಗದ ರೈತರು ಕಷ್ಟಕೊಳಗಾದರು. ಅದಕ್ಕಾಗಿ ಈ ಬಾರಿಯಾದರೂ ಈ ಎಲ್ಲ ವಿಷಯಗಳನ್ನು ಗಮನದಲಿಟ್ಟುಕೊಂಡು 14 ದಿನಗಳು ಚಾಲುವು 8 ದಿನ ಬಂದ್ ಪ್ರಕ್ರಿಯೆ ಮಾಡಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಯುವ ಘಟಕದ ಅಧ್ಯಕ್ಷರಾದ ವೆಂಕಟೇಶ ನಾಯಕ ಆಲ್ದಾಳವರರು ಮನವಿ ಮಾಡಿದರು.
ವರದಿ 👉
ಎಚ್ ಎಮ್ ಹವಾಲ್ದಾರ.
ಅಹಿಂದ ಬಂದು ಪತ್ರಿಕೆ, ಯಾದಗಿರಿ

More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…
ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ