*ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು*
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ತಾಲೂಕು ಘಟಕ ಜಮಖಂಡಿ ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಶುಭ ಕೋರಿದರು*
ಈ ಸಂದರ್ಭದಲ್ಲಿ ಜಮಖಂಡಿ ಮಾಜಿ ಶಾಸಕರುಗಳಾದ ಸನ್ಮಾನ್ಯ ಶ್ರೀ ಆನಂದ ನ್ಯಾಮಗೌಡ ಸನ್ಮಾನ್ಯ ಶ್ರೀ ಶ್ರೀಕಾಂತ್ ಕುಲಕರ್ಣಿ ರವರು ಸೇರಿದಂತೆ ಜಮಖಂಡಿ ತಾಲೂಕು ಮುಖಂಡರು ತಾಲೂಕು ಅಧ್ಯಕ್ಷರು ಸಮಾಜದ ಬಂಧುಗಳು ಮಹಿಳೆಯರು ಯುವಕರು ಉಪಸ್ಥಿತರಿದ್ದರು
ಸಮಯ:1:೦೦ ರಿಂದ
ಸ್ಥಳ: ಮುದೋಳ
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಜಡಗಣ್ಣ ಬಾಲಣ್ಣರ ಮೂರ್ತಿಗಳ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀವ೯ಚನ ನೀಡಿದರು
ಕಾರ್ಯಕ್ರಮದಲ್ಲಿ ಬಂಡಿಗಣಿ ದಾಸೋಹ ಚಕ್ರವರ್ತಿ ಅನ್ನ ದಾನೇಶ್ವರರು, ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು, ಸಮ್ಮುಖ ಸಾನಿದ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ರವರು, ಸಚಿವರಾದ ಸನ್ಮಾನ್ಯ ಶ್ರೀ ಆರ್.ಬಿ.ತಿಮ್ಮಾಪೂರ ರವರು, ಮಾಜಿ ಸಚಿವರು ಹಾಗೂ ಚಿತ್ರದುರ್ಗ ಸಂಸದರಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳ ರವರು. ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ ರವರು, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶ್ರೀ ದ್ಯಾಮಣ್ಣ ಗಾಳಿ, ತಾಲೂಕು ಅಧ್ಯಕ್ಷರಾದ ಶ್ರೀ ಭೀಮಪ್ಪ ತಳವಾರ, ಕೆಎಂಎಫ್ ನಿರ್ದೇಶಕರಾದ ಶ್ರೀ ಲಕ್ಷ್ಮಣರವರು, ಸೇರಿದಂತೆ ಜಿಲ್ಲಾ ಮುಖಂಡರು, ಸಮಾಜದ ಮುಖಂಡರು ಮಹಿಳೆಯರು ಯುವಕರು ಉಪಸ್ಥಿತರಿದ್ದರು.
ವರದಿ👉
ಎಚ್ ಎಮ್ ಹವಾಲ್ದಾರ,
ಅಹಿಂದ ಬಂದು ಪತ್ರಿಕೆ, ಮೂದೋಳ

More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ