November 4, 2025

ಸುರುಪುರ ಪೋಲಿಸ್ ಠಾಣೆ ಪಿಎಸ್ಐ ಉಮೇಶ್ ಎಮ್ ಅವರು ರೌಡಿ ಶೀಟರ್ ಜೋತೆ ಹುಟ್ಟು ಹಬ್ಬ ಆಚರಣೆಮಾಡಿಕೊಂಡ ಆರೋಪ* 

*ಸುರುಪುರ ಪೋಲಿಸ್ ಠಾಣೆ ಪಿಎಸ್ಐ ಉಮೇಶ್ ಎಮ್ ಅವರು ರೌಡಿ ಶೀಟರ್ ಜೋತೆ ಹುಟ್ಟು ಹಬ್ಬ ಆಚರಣೆಮಾಡಿಕೊಂಡ ಆರೋಪ*

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ನಾರಾಯಣಪೂರ ಪೊಲೀಸ್ ಠಾಣೆ ಪಿ.ಎಸ್.ಐ ರಾಜಶೇಖರ್ ರಾಠೋಡ ಅವರು ಹತ್ತು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಡಗರ ಸಂಭ್ರಮ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಿಎಸ್ಐ ಜೊತೆ ಫೋಟೋ ತೆಗೆಸಿಕೊಂಡಿದ್ದರು .ಇದನ್ನು ಉದ್ದೇಶ ಪೂರ್ವಕವಾಗಿ ಕೆಲವರು ಪಿಎಸ್ಐ ಅವರು ರೌಢೀ ಸೀಟರ ಜೊತೆ ಫೋಟೋ ತೆಗೆಸಿಕೊಂಡರು ಎಂಬ ಕಾರಣಕ್ಕಾಗಿ ಸದರಿ ಪಿಎಸ್ಐ ಅವರನ್ನು ಅಮಾನತ್ತು ಮಾಡಲಾಗಿದೆ.

ಆದರೆ ಮೊನ್ನೆ ತಾನೇ ಸುರುಪುರ ಪೋಲಿಸ್ ಠಾಣೆ ಪಿಎಸ್ಐ  ಎಂ. ಉಮೇಶ್ ಅವರು ಪೊಲೀಸ್ ಸಮವಸ್ತ್ರದಲ್ಲಿಯೇ ಸುರಪುರದ ಗಾಂಧಿ ವೃತ್ತದಲ್ಲಿ ರೌಡಿ ಶೀಟರ್ ಗಳಾದ ಬಲಬದಿಯಲ್ಲಿರುವ ಮಲ್ಲು ಕಬಡಿಗೇರಾ .ಹಾಗೂ ಸಿ ಪಿ ಐ ಯವರ ಹಿಂಬದಿಯಲ್ಲಿರುವ ವೆಂಕಟೇಶ್ ಗುಡ್ಡಕಾಯ. ಸಾ=ಕುಂಬರಪೇಟ ತಾ. ಸುರಪುರ ಇವರು ಸಿ ಪಿ ಐ ಯವರ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಸಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಜೊತೆಗೆ ಸಿ ಪಿ ಐ ಉಮೇಶ್.ಎಮ್ ಅವರು ಸುರಪುರ ಪೋಲಿಸ್ ಠಾಣೆಗೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಮತ್ತು ಸುರುಪುರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದಲ್ಲಿರುವ ಅಂಬೇಡ್ಕರ್ ಉದ್ಯಾನವನಕ್ಕೆ ಸಂಬಂಧಿಸಿದಂತೆ ಜಾಗದ ಬಗ್ಗೆ ವಾಲ್ಮೀಕಿ ಸಮುದಾಯದ ಜನ ಮತ್ತು ದಲಿತ ಸಮುದಾಯಗಳ ನಡುವೆ ವೈಷಮ್ಯ ಹರಡಲು ಕಾರಣರಾಗಿದ್ದು ಆದ ಕಾರಣ ಸುರಪುರ ಸಿಪಿಐ ಯವರನ್ನು ವಜಾಗೊಳಿಸಬೇಕೆಂದು ಮಲ್ಲಿಕಾರ್ಜುನ್ ಕ್ರಾಂತಿ ರಾಜ್ಯ ಸಂಘಟನಾ ಸಂಚಾಲಕರು ಕ್ರಾಂತಿಕಾರಿ ಬಣ ksdss ಬೆಂಗಳೂರು, ಅವರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

 

1 ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು.

2 ಪೊಲೀಸ್ ಉಪ ಮಹಾನಿರ್ದೇಶಕರು ಈಶಾನ್ಯ ವಲಯ ಕಲಬುರ್ಗಿ.

3 ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗಿರಿ, ಅವರಿಗೆ ಮನವಿ ಸಲ್ಲಿಸಿದ್ದಾರೆ.

 

ವರದಿ 👉

ಎಚ್ ಎಮ್ ಹವಾಲ್ದಾರ,

ಅಹಿಂದ ಬಂದು ಪತ್ರಿಕೆ, ಯಾದಗಿರಿ

error: Content is protected !!