November 4, 2025

ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ* 

*ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*

 

ಇಂದು ದಿನಾಂಕ: 02/11/2025 ರಂದು ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘ ಕಲಬುರಗಿ ವಿಭಾಗ ಘಟಕದ ಅಧ್ಯಕ್ಷರಾದ ಶ್ರೀ ನಂದು ಕುಮಾರ್ ಮಾಲಿಪಾಟೀಲ್ ಹಾಗೂ ರಾಮು ನಾಯಕ ಆರಹಳ್ಳಿ ರವರ ನಿರ್ದೇಶನದಂತೆ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹೇಶ್ ನಾಯಕ ಉಡಗಿ ಅವರ ನೇತೃತ್ವದಲ್ಲಿ ಇಂದು ಚಿಂಚೋಳಿ ತಾಲೂಕಿನ ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಮತ್ತು ಶ್ರೀ ಕಿರಣ ಎಸ್ ನಾಯಕ ಪ್ರಧಾನ ಕಾರ್ಯದರ್ಶಿ ಅವರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ನೇಮಕ ಮಾಡ ಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ. ತಿಳಿಸಿ ಶುಭಕೋರಲಾಯಿತು.

ಈ ಸಂದರ್ಭದಲ್ಲಿ ಮಾರುತಿ ಜಮಾದಾರ್ ಸೇರಿ , ಶ್ರಾವಣ ಕುಮಾರ್ ಡಿ ನಾಯಕ ಎಸ್ಸಿ /ಎಸ್ಟಿ ನಕಲಿ ಜಾತಿ ತಡೆ ಸಮಿತಿ ರಾಜ್ಯ ಅಧ್ಯಕ್ಷರು, ಕಾಳಗಿ ತಾಲೂಕ ಅಧ್ಯಕ್ಷರಾದ ಮಾರುತಿ ಜಾಕನಳ್ಳಿ, ಚಿಂಚೋಳಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಜನಾರ್ದನ ಮೇಲಗಿರಿ , ಕಾರ್ಯದರ್ಶಿ ರಾದ ಮಹೇಶ್ ನಾಯಕ , ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ರಾದ ದೇವು ಹಾಗೂ ಸಮಾಜದ ಅನೇಕ ಮುಖಂಡರು ಭಾಗವಹಿಸಿದರು.

 

ವರದಿ👉

ಎಚ್ ಎಮ್ ಹವಾಲ್ದಾರ,

ಅಹಿಂದ ಬಂದು ಪತ್ರಿಕೆ, ಕಲಬುರ್ಗಿ

error: Content is protected !!