*ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ*
ಸುರಪುರ:ಜಯಕರ್ನಾಟಕ ಜನಪರ ವೇದಿಕೆಯಿಂದ ದೀವಳಗುಡ್ಡದ ವೇದಿಕೆಯ ಧ್ವಜಕಟ್ಟೆಯಲ್ಲಿ ವೇದಿಕೆಯ ೫ನೇ ವರ್ಷದ ಸ್ಥಾಪನೆ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಲಾಯಿತು.
ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರನಾಯಕ ಭೈರಿಮಡ್ಡಿ ಮಾತನಾಡಿ, ನಮ್ಮ ವೇದಿಕೆ ಗುಣರಂಜನಶೆಟ್ಟಿ ನೇತೃತ್ವದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ನಡೆಸುವುದಲ್ಲದೇ ಪರಿಸರ ಉಳಿಸಲು ಸಸಿ ನೆಡುವ ಕಾರ್ಯಕ್ರಮ ಆಯೋಜಿಸುತ್ತಿದೆ .
ಕನ್ನಡ ನಮ್ಮ ಉಸಿರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು. ಸರ್ಕಾರಿ ಸೇವೆ ಅಲ್ಲದೇ, ಖಾಸಗಿ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ದೊರಕಬೇಕು ಎಂಬ ಹೋರಾಟ ನಮ್ಮದಾಗಿದೆ ಎಂದರು ಹೇಳಿದರು.
ದ್ವಜಾರೋಹಣದ ನಂತರ ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಸಿ ನೆಡಲಾಯಿತು. ಈ ಮೂಲಕ ಎಲ್ಲರಿಗೂ ಪರಿಸರ ಜಾಗೃತಿ ಮೂಡಿಸಲಾಯಿತು.
ಮುಖ್ಯ ಶಿಕ್ಷಕಿ ಹಸೀನಾ ಬಾನು ಮಾತನಾಡಿ, ಪರಿಸರ ರಕ್ಷಣೆ ಇಂದಿನ ಅವಶ್ಯ. ಜಯಕರ್ನಾಟಕ ಜನಪರ ವೇದಿಕೆ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕಾಧ್ಯಕ್ಷ ಗೋಪಾಲನಾಯಕ ಸತ್ಯಂಪೇಟ, ಮಾಜಿ ಸೈನಿಕ ಭೀಮಣ್ಣ ಪೀರಬಾಯಿ, ಶಿಕ್ಷಕರಾದ ಮಲ್ಲಿಕಾರ್ಜುನ ಜಟಗಿಮಠ, ಶಿವರಾಜ, ಶಾರದಾ, ಸವಿತಾ ಮಠ, ಖಾಜಬಿ, ಎಸ್‌ಡಿಎಂಸಿ ಅಧ್ಯಕ್ಷರಾದ ಮಲ್ಲಪ್ಪ ಶುಕ್ಲ, ಗಂಟೆಪ್ಪ, ಗೌರವಾಧ್ಯಕ್ಷ ಶಿವರಾಜನಾಯಕ ಸತ್ಯಂಪೇಟ, ಪ್ರಧಾನ ಕಾರ್ಯದರ್ಶಿ ದೇವುನಾಯಕ ಜಾಲಿಬೆಂಚಿ, ಉಪಾಧ್ಯಕ್ಷರಾದ ರವಿ ಹುಲಕಲ್, ರಾಘವೇಂದ್ರ ಎಲಿಗಾರ, ರಾಘವೇಂದ್ರ ಸಗರ, ಬಸವರಾಜ ಪಾಟೀಲ ಶಾಖಾಪುರ, ಪ್ರಧಾನ ಸಂಚಾಲಕ ದೇವು ದೇವಿಕೇರಾ, ಸಂಚಾಲಕ ನಿಂಗಣ್ಣ ದುಸ್ತಾರಿ, ಜಂಟಿ ಕಾರ್ಯದರ್ಶಿ ಮರೆಪ್ಪ ಹಾದಿಮನಿ ದೀವಳಗುಡ್ಡ, ಕಾರ್ಯದರ್ಶಿಗಳಾದ ಭೀಮಣ್ಣ ಗಡ್ಡಿಮನಿ, ಕೃಷ್ಣಾನಾಯಕ ಸತ್ಯಂಪೇಟ, ಸಹ ಕಾರ್ಯದರ್ಶಿ ಶಿವಮೂರ್ತಿ, ಸಹ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ದೇವಿಕೇರಿ, ಖಜಾಂಚಿ ಬಸಪ್ಪ ಯಾಳವಾರ, ಸಹ ಖಜಾಂಚಿ ಮರೆಪ್ಪ ಕೋಮಾರಿ, ಊರಿನ ಗಣ್ಯರಾದ ಹಣಮಂತ್ರಾಯ ಪೀರಬಾವಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಲ್ಲಪ್ಪ ಚೌಡೇಶ್ವರಿಹಾಳ, ಶ್ರೀನಿವಾಸ ದೇಶಪಾಂಡೆ, ಶಿಗೊಂಟೆಪ್ಪ ಶೀಲಾ, ಯಲ್ಲಪ್ಪ ಮಟ್ಲಾ, ಶರಣಪ್ಪ ಅನಸೂರ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಇತರರು ಉಪಸ್ಥಿತರಿದ್ದರು
ವರದಿ👉
ಎಚ್ ಎಮ್ ಹವಾಲ್ದಾರ,
ಅಹಿಂದ ಬಂದು ಪತ್ರಿಕೆ, ಯಾದಗಿರಿ
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯ ಕರ್ನಾಟಕ ತಾಲೂಕು ಘಟಕದಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ*