November 4, 2025

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು… 

*ಬಿದಿನಾಯಿಗಳ ಕಾಟಕ್ಕೆ ಬೆಸತ್ತ ವಾಹನ ಸವಾರರು*

 

 

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…

 

ದಿನ ಬೆಳಗಾದರೆ ಸಾವಿರಾರು ಜನ ಸಂದಣಿ ಇರುವ ಈ ಕೆಂಭಾವಿ, ಸುರಪುರ, ತಾಳಿಕೋಟೆ ಹೋಗುವ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಬೇಸತ್ತು ಹೋಗಿದ್ದಾರೆ ಎಂದು ಬಂದೆನವಜ್ ನೀರಲಗಿ ಅವರು ತಿಳಿಸಿದ್ದಾರೆ.

ಕೆಲವು ಬೈಕ್ ಸವಾರರು ಬೀದಿನಾಯಿಗಳು ಅಡ್ಡ ಬಂದು ವಾಹನ ಸಮೇತ ರಸ್ತೆಯಲ್ಲಿ ಬಿದ್ದಿರುವ ಘಟನೆ ಕೂಡಾ ನಡೆದಿದೆ ಎಂದು ತಿಳಿಸಿದರು.

ಆದ್ದರಿಂದ ಪುರಸಭೆ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಂದೆನವಾಜ್ ನೀರಲ್ಲಿ ಅವರು ಮನವಿ ಮಾಡಿದರು. ಆದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಏನು ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

 

ವರದಿ 👉

ಎಚ್.ಎಂ.ಹವಲ್ದಾರ್ ನಾಗನೂರ.

ಅಹಿಂದ ಬಂಧು ಕನ್ನಡ,

 

 

error: Content is protected !!