ವಿಜಯಪುರ :
ವಿಜಯಪೂರ ಜಿಲ್ಲೆಯ, ನೂತನ ದೇವರ ಹಿಪ್ಪರಗಿ ತಾಲೂಕೀನ, ಕೆರುಟಗಿ ಗ್ರಾಮದಲ್ಲಿನ ರೈತರುಗಳಿಗೆ ಬೇಳೆ ವಿಮೆ ತುಂಬಿದ್ದರು ಕೂಡಾ ಬೇಳೆ ವಿಮೆ ಜಮೆ ಆಗಿಲ್ಲದಂತಹ ಸಮಸ್ಯೆ ಎದುರಾಗಿ.
ಬೇಳೆ ವಿಮೆ ಜಮೆ ಆಗದೆ ಇದ್ದದ್ದಕ್ಕೆ ಆಕ್ರೋಶಗೊಂಡ ಕೆರುಟಗಿ ಗ್ರಾಮದ ರೈತರು, ಗ್ರಾಮಸ್ಥರು, ಇವತ್ತು ಹೋರಾಟವನ್ನು ಹಮ್ಮಿಕೊಂಡು, ತಸಿಲ್ದಾರ ಕಛೇರಿಗೆ ಮುತ್ತಿಗೆ ಹಾಕಿ, ಗ್ರಾಮದ ರೈತರಿಗೆ ಬೇಳೆ ವಿಮೆ ಹಣವನ್ನು ಜಮೆ ಆಗದೆ ಇದ್ದದ್ದು ತಸಿಲ್ದಾರ ರವರ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಪ್ರತಿನಿಧಿಯಾದ ಶ್ರೀ ಸಿದ್ದು ಬುಳ್ಳಾರವರು , ಕೇವಲ ಒಂದು ಸಾವಿರ ಹಣ ಕೋಟ್ಟಂತವರಿಗೆ ಮಾತ್ರ, ಬೇಳೆ ವಿಮೆ ಜಮೆ ಆಗಿದ್ದು, ಬೇಳೆ ವಿಮೆ ತುಂಬಿದ ರೈತರಿಗೆ, ಬೇಳೆ ವಿಮೆ ಹಣ ಜಮೆ ಆಗಿಲ್ಲ.
ಬೇರೆ ಊರಿನ ಗ್ರಾಮದ ರೈತರ ಹಣ ನಮ್ಮ ಊರಲ್ಲಿ ಜಮೆ ಆಗಿದೆ, ನಮ್ಮೂರಿನ ರೈತರಲ್ಲಿ ಬರಿ ಕೇವಲ ಹತ್ತು ಹದಿನೈದು ಜನ ರೈತರಿಗೆ ರತರನ್ನ ಬಿಟ್ಟರೆ ಮತ್ತೆ, ಯಾರಿಗೂ ಜಮೆ ಆಗಿಲ್ಲ.
ಇದೆ ರೀತಿಯಾಗಿ ನಮ್ಮೂರಿನ ರೈತರಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ, ನಾವು ಸಹಿಸುವುದಿಲ್ಲ.
ಮುಂದಿನ ದಿನಮಾನಗಳಲ್ಲಿ ರಸ್ತೆ ಬಂದ್ ಮಾಡಿ ಹೋರಾಟ ಮಾಡಲಾಗುವುದು ಮತ್ತು ಇದಕ್ಕೂ ಜಗದೆ ಬಗ್ಗದೆ ಹೋದರೆ ಆಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಉಗ್ರವಾದ ಹೋರಾಟ ಕೈಗೋಳ್ಳಲ್ಲಾಗುವದು ಎಂದು ತಮ್ಮ ರೋಷಾಆವೇಶದ ಭಾಷಣದ ಮೂಲಕ ತಹಸಿಲ್ದಾರ್ ರವರಿಗೆ ರೈತರಿಗಾದ ಅನ್ಯಾಯವನ್ನು ತಿಳಿಸಿ ತಮ್ಮ ನೋವನ್ನು ತೋಡಿಕೊಂಡರು.

ಈ ಹೋರಾಟದಲ್ಲಿ…. ಮಲಕಾಜಯ್ಯ ಮುತ್ಯಾ, ಸುಭಾಸ್ ಸವಾಕಾರ ಚಟ್ಟರಕಿ ಕುಮಾರ ಚಟ್ಟರಕಿ, ಕಲ್ಲಯ್ಯ ಮುತ್ಯಾ, ಅಜಮೀರ ಸಾಬ್ ಚೌದರಿ, ಮಲ್ಲಣ್ಣಗೌಡ , ಕಾಡಪ್ಪ ಗೌಡ ಬಿರಾದಾರ,ಗ್ರಮ ಪಂಚಾಯತ್ ಸದಸ್ಯ ಸಿದ್ರಾಮಪ್ಪ ಮಾದರ.ಏಸಣ್ಣ ಗೌಡ ಬಿರಾದಾರ , ಚಂದಪ್ಪ ಪೂಜೆರಿ ಹುಡೇದ, ಮಕ್ತುಮ್ ಸಾಬ್ ಚೌದರಿ, ಮಲಕಪ್ಪ ನಾಯಿಕೊಡಿ.ಶಿವಪ್ಪ ಹುಡೇದ, ಮಕ್ತುಮ ಸಾಬ್ ಚೌದರಿ, ಗೋಲ್ಲಾಳಪ್ಪ ಗೌಡ ಲಾಯದಗುಂದಿ, ಮೈಲಗುಲ್ಲಿ ಬುಡ್ಡೆಸಾಬ, ಲಬಿಲಾಲ ಸಾಬ ಬಾಗವಾನ, ಶರಣಪ್ಪ ಗುಡಿಮನಿ , ಅಂಬಾಬಾಯಿ ಜಮಾದರ, ಮಡೆಮ್ಮ ಪೂಜೆರ್ತಿ, ಗೆಂದಾಬಾಯಿ ಜಮಾದಾರ, ಬಸಪ್ಪ ಮಾದರ, ಮರಳಪ್ಪ ಬಿಳಗಿ, ನಿಂಗಪ್ಪ ಮಾದರ , ಲಚ್ಚೇಮ್ಮ ಜಮಾದಾರ,ಕೆರುಟಗಿ ಗ್ರಾಮದ ಗುರು ಹಿರಿಯರು, ಗ್ರಾಮದ ಮುಖ್ಯಸ್ಥರು, ಮಹಿಳೆಯರು, ಸಮಸ್ತ ಗ್ರಾಮದ ಗ್ರಾಮಸ್ಥರು ಬಾಗವಹಿಸಿದ್ದರು.
ಜಿಲ್ಲಾ ವರದಿಗಾರರು ಮೖಬೂಬಬಾಷ ಮನಗೂಳಿ. 6362760741.

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…