November 4, 2025

ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ, ಹಸಿರು ಕರ್ನಾಟಕ ನಿರ್ಮಾಣದ 50 ವರ್ಷಗಳ ಸೇವೆ ಯಶಸ್ವಿ….

*ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ, ಹಸಿರು ಕರ್ನಾಟಕ ನಿರ್ಮಾಣದ 50 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ*

 

ದಿನಾಂಕ 04-11-2025 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಅವರು ಬೆಳಗಾವಿ ನಗರದಲ್ಲಿ ನಡೆದ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ, ಹಸಿರು ಕರ್ನಾಟಕ ನಿರ್ಮಾಣದ ಧ್ಯೇಯದೊಂದಿಗೆ 50 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ “ಸುವರ್ಣ ಮಹೋತ್ಸವ – 31 ಜಿಲ್ಲೆಗಳು, ಒಂದೇ ಧ್ಯೇಯ, ಮುಕ್ತ ಕರ್ನಾಟಕ” ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ಆಸಿಫ್ ಸೇಠ್, ಮಾಜಿ ರಾಜ್ಯಸಭಾ ಸದಸ್ಯರು ಡಾ.‌ಪ್ರಭಾಕರ ಕೋರೆ, ವಿ.ಪ.‌ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್, ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಜಾನಕಿ ಕೆ.ಎಂ, ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ್ ಗುಳೇದ್, ಮಂಜುನಾಥ್ ಚೌವಾಣ, ಪ್ರದೀಪ್ ಮಮದಾಪುರ, ಗೋಪಾಲಕೃಷ್ಣ ಸನತಂಗಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಸುನೀಲ ಹಣಮನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ವರದಿ 👉ಎಚ್ ಎಮ್ ಹವಾಲ್ದಾರ,

ಅಹಿಂದ ಬಂದು ಪತ್ರಿಕೆ, ಬೆಳಗಾವಿ

error: Content is protected !!