November 4, 2025

ಅತ್ನೂರು ಗ್ರಾಮಗ್ರಾಮದಲ್ಲಿಬೇಡರ ಕಣ್ಣಪ್ಪ ಕಾಲೋನಿ ಹಾಗೂ ನಾಮಪಲಕ ಅನಾವರಣ

*ಅತ್ನೂರು ಗ್ರಾಮಗ್ರಾಮದಲ್ಲಿಬೇಡರ ಕಣ್ಣಪ್ಪ ಕಾಲೋನಿ ಹಾಗೂ ನಾಮಪಲಕ ಅನಾವರಣ*

 

ರಾಯಚೂರು ಜಿಲ್ಲೆ ಸಿರವಾರ ತಾಲೂಕು ಅತ್ನೂರು ಗ್ರಾಮಗ್ರಾಮದಲ್ಲಿ ಬೇಡರ ಕಣ್ಣಪ್ಪ ಕಾಲೋನಿ ಹಾಗೂ ನಾಮಪಲಕ ಅನಾವರಣ ಮಾಡಲಾಯಿತು. ಬೇಡರ ಕಣ್ಣಪ್ಪನಿಗೆ ಪೂಜೆ ಕಾರ್ಯಕ್ರಮವನ್ನು ಬಸಲಿಂಗಯ್ಯ ಸ್ವಾಮಿಗಳು ನೆರವೇರಿಸಿದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹನುಮಂತರಾಯ ಗಚ್ಚಿನ ಮನೆ ಅವರು ವಾಲ್ಮೀಕಿ ನಾಯಕ ಸಮಾಜ ದೇಶಕ್ಕೆ ಬಾಳ ಕೊಡುಗೆ ನೀಡಿದೆ ಎಂದು ಮಾತನಾಡಿದರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ ಪುತ್ರರಾದ ವೀರಭದ್ರಯ್ಯ ಸ್ವಾಮಿ ಮಾತನಾಡಿ ಬೇಡರ ಕಣ್ಣಪ್ಪ ಇತಿಹಾಸ ಹಾಗೂ ಸಮಾಜದ ಉದ್ದೇಶದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ ಈರಣ್ಣ. ಈರಪ್ಪ ನಾಯಕ್ ಈರಣ್ಣ ಜಗ್ಲಿ ಹನುಮಂತರಾಯ ನಾಯಕ್, ಇಶಾಕ್ ಸಾಬ್, ಶಾಂತಪ್ಪ ಮಾಸ್ಟರ್, ಭೀಮರಾಯಸ್ವಾಮಿ, ಚನ್ನಪ್ಪ ಮಲದ ಗುಡ್ಡ, ಬಸವರಾಜ್ ಮರ್ಕಮ್, ದಿನ್ನಿ ಬ್ರಹ್ಮಜಿ ವಿರುಪಾಕ್ಷಿ, ಜಗ್ಲಿ ಇರ್ಫಾನ್, ಹನುಮೇಶ್ ಜಗ್ಲಿ, ಮಾಂತೇಶ್ ಮೇತ್ರಿ, ಪೆದ್ದಯ್ಯ ನಾಯಕ್ ಜಮ್ಸಿ ರಲಿ ಮಂಜುನಾಥ್ ಸಮಾಜದ ಯುವಕರು ಭಾಗವಹಿಸಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಕೆ ದುರ್ಗಣ್ಣ ವಂದಿಸಿದರು.

 

ವರದಿ 👉ಎಚ್ ಎಮ್ ಹವಾಲ್ದಾರ,

ಅಹಿಂದ ಬಂದು ಪತ್ರಿಕೆ, ರಾಯಚೂರು

error: Content is protected !!