November 4, 2025

ಸುರಪುರ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘಕ್ಕೆ ರಾಜಿನಾಮೆ ನೀಡಿದ ಶ್ರೀನಿವಾಸ್ ದೋರಿ ಮಾಲಗತ್ತಿ

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಗೌರವಧ್ಯಕ್ಷರ ಸ್ಥಾನ ಕಾರ್ಯನಿರ್ವಹಿಸುತ್ತಿರುವ ನಾನು ಸಂಘದ ಪದಾಧಿಕಾರಿಗಳ ಅಸಹಕಾರದಿಂದ ನನಗೆ ನೋವು ಉಂಟಾಗಿದ್ದು ಆದ್ದರಿಂದ ಈ ಗೌರವಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು

ಶ್ರೀನಿವಾಸ್ ದೊರೆ ಮಾಲಗತ್ತಿ ಅವರು ಮನವಿಯಲ್ಲಿ ಉಲ್ಲೇಖಸಿದ್ದಾರೆ

ಮತ್ತು ಸಂಘಟನೆಯಿಂದ ರಾಜೀನಾಮೆ ನೀಡಿದರು ಕೂಡ ಸಮಾಜ ಎಂದು ಬಂದಾಗ ಸಮಾಜದ ಕಾರ್ಯಕ್ಕೆ ನಾನು ಸದಾ ಸಿದ್ಧನಾಗಿರುತ್ತೇನೆ. ಸಮಾಜಮುಖಿ ಕೆಲಸಕ್ಕೆ ಯಾವಾಗಲೂ ನಾನು ಕೈಜೋಡಿಸುತ್ತೇನೆ ಎಂದು ತಿಳಿಸಿದರು

ಮತ್ತು ಈ ಮನವಿಯನ್ನು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷರು ಗೌಡಪ್ಪ ಗೌಡ ಆಲ್ದಾಳ ಹಾಗೂ ಸುರಪುರ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಿಗೆ ಮನವಿ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.

*ವರದಿ – ಹುಲಗಪ್ಪ ಎಂ ಹವಾಲ್ದಾರ್.*

error: Content is protected !!