November 4, 2025

ದೇವನಹಳ್ಳಿ, ಚನ್ನರಾಯಪಟ್ಟಣ ರೈತ ಸಮಿತಿಯಿಂದ ರೈತರಿಗೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ…

*ದೇವನಹಳ್ಳಿ, ಚನ್ನರಾಯಪಟ್ಟಣ ರೈತ ಸಮಿತಿಯಿಂದ ರೈತರಿಗೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ*

ಬೆಂಗಳೂರು ಫೀಡಂ ಪಾರ್ಕ್ ನಲ್ಲಿ ದೇವನಹಳ್ಳಿ ಸುತ್ತಮುತ್ತ ಹೈಟೆಕ್ ಡಿಫೆನ್ಸ್ ಮತ್ತು ಏರೋ್ಪೇಸ್ ಪಾರ್ಕ್ ನಿರ್ಮಾಣ ಭೂಮಿ ಕೊಡುವ ರೈತರಿಗೆ ನ್ಯಾಯ ಕೊಡಿ ಎಂದು ದೇವನಹಳ್ಳಿ ಚನ್ನರಾಯಪಟ್ಟಣ ರೈತ ಸಮಿತಿ ವತಿಯಿಂದ ಕೆ.ಐ.ಎ.ಡಿ.ಬಿ.ಉದ್ದೇಶಿಸಿರುವ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಬಳಿ ಕೈಗಾರಿಕಾ ಅಭಿವೃದ್ದಿಗಾಗಿ ಭೂಸ್ವಾಧಿನದಿಂದ ರೈತರ ಭೂಮಿಗೆ ಹೆಚ್ಚು ಪರಿಹಾರ ಮತ್ತು ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿ ನೂರಾರು ರೈತರಿಂದ ಪ್ರತಿಭಟನೆ.

ಸಮಿತಿ ಸಂಚಾಲಕರುಗಳಾದ ಶ್ರೀನಿವಾಸ್, ಪ್ರಕಾಶ್ ಡೊಡ್ಡೇಗೌಡ, ರಂಗಣ್ಣ, ಜಗದೀಶ್, ಭರತ್, ದೇವರಾಜ್ ರವರ ಜೊತೆಯಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಸಂಚಾಲಕರಾದ ಶ್ರೀನಿವಾಸ್ ರವರು ರೈತ ಈ ದೇಶದ ಬೆನ್ನುಲುಬು ರೈತ ಉಳಿದರೆ ಮಾತ್ರ ದೇಶದ ಜನರು ಉಳಿಯುತ್ತಾರೆ.

ಅಭವೃದ್ದಿ ಹೆಸರಿನಲ್ಲಿ ಕೆಐಎಡಿಬಿ ರೈತನ ಜಮೀನ ವಶಕ್ಕೆ ಪಡೆಯುತ್ತಾರೆ ಅಭಿವೃದ್ದಿ ಮಾಡಿ ಬೇಡ ಏನ್ನುವುದಿಲ್ಲ ಅದರೆ ರೈತನಿಗೆ ನ್ಯಾಯಕೊಡಿ ಅಂದರೆ ಪರ್ಯಾಯ ಜಮೀನು ನೀಡುವುದು ಅಥವಾ ಉತ್ತಮ ಬೆಲೆ ಜಮೀನಿಗೆ ನೀಡುವುದು ಹಾಗೂ ಸರ್ಕಾರಿ ಉದ್ಯೋಗ ಅಥವಾ ರೈತನ ಜಮೀನಿನಲ್ಲಿ ನಿರ್ಮಾಣವಾದ ಕಾರ್ಖಾನೆ, ಸಂಸ್ಥೆಯಲ್ಲಿ ಜಮೀನು ಕಳೆದುಕೊಂಡವರಿಗೆ ಉದ್ಯೋಗ ನೀಡುವುದು ಮಾಡಿದರೆ ಮಾತ್ರ ಸಹಕಾರ ನೀಡುತ್ತೇವೆ ಇಲ್ಲದೆ ಹೋದರೆ ಸರ್ಕಾರದ ವಿರುದ್ದ ನಿರಂತರ ಹೋರಾಟ ಮಾಡುತ್ತೇವೆ.

ನಿಜವಾದ ರೈತ ಯಾರು ಎಂಬುದು ನಮ್ಮ ಆರ್.ಟಿ.ಸಿ.ಯನ್ನು ಪರಿಶೀಲಿಸಿ ಮತ್ತು ಸರ್ಕಾರಕ್ಕೆ ಜಮೀನು ಕೆ.ಐ.ಎ.ಡಿ.ಬಿ.ಗೆ ಬಿಟ್ಟು ಕೊಡಲು ಸಿದ್ದರಿದ್ದೇವೆ, ರಿಯಲ್ ಎಸ್ಟೆಟ್ ಮಾಫಿಯದವರಿಗೆ ಬಿಟ್ಟು ಕೊಡಲ್ಲ ತಯಾರಿಲ್ಲ. ಧರಣಿ ನಡುಸುತ್ತಿರುವ ಅವರೆಲ್ಲ ರಾಜಕಾರಣಿಗಳು ರಿಯಲ್ ಎಸ್ಟೇಟ್ ಮಾಫಿಯ ಕುಮಕ್ಕುನಿಂದ ಹೋರಾಟ ಮಾಡುತ್ತಿದ್ದಾರೆ.

ನಮಗೆ ಸರ್ಕಾರಕ್ಕೆ ಭೂಮಿ ಕೊಡಲು ಯಾವುದೇ ಅಕ್ಷೇಪಣೆ ಇಲ್ಲ.ನಮಗೆ ಹೆಚ್ಚಿನ ಪರಿಹಾರದ ಬೇಡಿಕೆ ಇದೆ ಮಕ್ಕಳಗೆ ಉದ್ಯೋಗ ಅವಕಾಶ ಬೇಕಾಗಿದೆ ಅವರ ಮುಂದಿನ ಜೀವನಕ್ಕಾಗಿ.
saz ಮಾಡಿದ್ದಲ್ಲಿ ನಮಗೆ ವ್ಯವಸಾಯ ಮಾಡಲು ನೀರಿನ ಕೊರತೆ ಇದೆ 1600ಕೊರೆಸಿದರು ನೀರು ಸಿಗುವುದಿಲ್ಲ ಅದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ನಮಗೆ ನ್ಯಾಯ ಸಿಕ್ಕಿಲ್ಲವೆಂದರೆ ನಿರಂತರ ಹೋರಾಟ ಮಾಡಲಾಗುವುದು .
ಎಂದು ಹೇಳಿದರು

error: Content is protected !!