November 4, 2025

ಕೊಳ್ಳೇಗಾಲ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುಶ್ಚಟಗಳಿಂದಾಗುವ ಅನಾಹುತ ಬಗ್ಗೆ ಮಕ್ಕಳಿಗೆ ಅರಿವು…..

ಚಾಮರಾಜನಗರ:    ದಿನಾಂಕ – 11/07/2025 ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ). ಕೊಳ್ಳೇಗಾಲ ತಾ. ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ಬೀಡಿ, ಸಿಗರೇಟು, ಹೊಗೆ ಸೊಪ್ಪು, ಗುಟಕ , ಗಾಂಜಾ, ಮದ್ಯಪಾನ, ಮೊಬೈಲ್, ಬೈಕ್ ವ್ಹೀಲಿಂಗ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಹಾಗೂ ಅದರಿಂದ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಮಾನವ ಹಕ್ಕುಗಳ ಜಾಗೃತಿ ಸೇನೆ(ರಿ)ಯ ಕರ್ನಾಟಕ ರಾಜ್ಯದ ಜಂಟಿ ಕಾರ್ಯದರ್ಶಿ ಬಿ.ವಿ. ಮಹೇಶ್ ರವರು ವಹಿಸಿದ್ದರು.

error: Content is protected !!