November 4, 2025

ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಚಿಕ್ಕಬಳ್ಳಾಪುರ ಘಟಕದ ಶುಭಾರಂಭ…

ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಚಿಕ್ಕಬಳ್ಳಾಪುರ ಘಟಕದ ಶುಭಾರಂಭ

ಇಂದು ದಿನಾಂಕ 10-07-2025, ಗುರುವಾರ, ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕವನ್ನು ಚಿಕ್ಕಬಳ್ಳಾಪುರ ಪಟ್ಟಣದಲ್ಲಿ ನೂತನ ಜಿಲ್ಲಾಧ್ಯಕ್ಷರಾದ ನರಸಿಂಹ ಗೌಡ ಮತ್ತು ನೂತನ ಜಿಲ್ಲಾ ಪದಾಧಿಕಾರಿಗಳ ಜೊತೆ ರಾಜ್ಯಾಧ್ಯಕ್ಷರಾದ ಶಿವಪ್ರಸಾದ್ (ಸೂರ್ಯಾಗ್ನಿ ಶಿವು) ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ರವರ ಉಪಸ್ಥಿತಿಯಲ್ಲಿ ಗೌರಿಬಿದನೂರು ರಸ್ತೆಯಲ್ಲಿರುವ ನರಸಿಂಹ ಗೌಡರವರ ಕಛೇರಿಯಲ್ಲಿ ಮಧ್ಯಾಹ್ನ 12:30ಕ್ಕೆ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.

ನೂತನ ಜಿಲ್ಲಾಧ್ಯಕ್ಷರಾಗಿ ನರಸಿಂಹ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಮಹೇಶ್, ಜಿಲ್ಲಾ ಕಾರ್ಯಧ್ಯಕ್ಷರಾಗಿ ಕೃಷ್ಣ ರೆಡ್ಡಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾಗಿ ಮೊಹಮ್ಮದ್ ನಾಸೀರ್, ಜಿಲ್ಲಾ ನಿರ್ದೇಶಕರಾಗಿ ಸುನಿಲ್, ಜಿಲ್ಲಾ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯ್ದು, ಜಿಲ್ಲಾ ಮಾಧ್ಯಮ ಸಲಹೆಗರರಾಗಿ ಆಂಜನಪ್ಪ, ಜಿಲ್ಲಾ ಸಂಚಾಲಕರಾಗಿ ತುಳಸಿನಾಯಕ್, ಜಿಲ್ಲಾ ನಿರ್ದೇಶಕರಾಗಿ ಚಂದ್ರಶೇಖರ ಎನ್ ವಿ, ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ್, ಜಿಲ್ಲಾ ಕಾನೂನು ಸಲಹೆಗಾರರಾಗಿ ರಾಘವೇಂದ್ರ ಮತ್ತು ಜಿಲ್ಲಾ ನಿರ್ದೇಶಕರಾಗಿ ಅರುಣ್ ಕುಮಾರ್ ರವರು ನೇಮಕವಾದರು. ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ರಾಜ್ಯಾಧ್ಯಕ್ಷರು ನೀಡಿದರು. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚು ಪತ್ರಕರ್ತರು ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ ಸೇರ್ಪಡೆ ಆಗಲಿದ್ದಾರೆ.

ಈ ಶುಭ ಸಂದರ್ಭದಲ್ಲಿ ಮಾತಾನ್ನಾಡಿದ ರಾಜ್ಯಾಧ್ಯಕ್ಷರಾದ ಶಿವಪ್ರಸಾದ್ ರವರು (ಸೂರ್ಯಾಗ್ನಿ ಶಿವು) ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯದ ಪತ್ರಕರ್ತರಿಗೆ ತಾರತಮ್ಯವಿಲ್ಲದೆ ಸಿಗಬೇಕಾದ ಸೌಲಭ್ಯವನ್ನು ರಾಜ್ಯ ಸರಕಾರದಿಂದ ಕೊಡಿಸುವತ್ತು ಸಂಘವು ಕಾನೂನಾತ್ಮಕ ಹೋರಾಟ ಮಾಡಲಿದೆ ಎಂದು ಹೇಳಿದರು. ಮುಖ್ಯವಾಗಿ ರಾಜ್ಯದ ಪತ್ರಕರ್ತರಿಗಾಗಿ (ಅಕ್ರೆಡಿಟೇಶನ್ ಹೊಂದಿರುವ ಅಥವಾ ಹೊಂದಿಲ್ಲದ ಪತ್ರಕರ್ತರಿಗೆ) ಪತ್ರಕರ್ತರ ರಕ್ಷಣಾ ಕಾಯ್ದೆ, ಉಚಿತ ಅಥವಾ ರಿಯಾಯಿತಿ ದರದಲ್ಲಿ ಸೂರು, ಆರೋಗ್ಯ ವಿಮೆ, ಉಚಿತ ಬಸ್ ಪಾಸ್, ಆರ್ಥಿಕ ಧನ ಸಹಾಯ, ಪತ್ರಕರ್ತರ ಅಭಿರುದ್ದಿ ನಿಗಮ, ಕೆಲವು ರಾಜಕೀಯ ಮುಖಂಡರು ಹಾಗೂ ಕೆಲವು ಸರಕಾರಿ ಅಧಿಕಾರಿಗಳಿಂದ ಪತ್ರಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಾಗೂ ಮತ್ತಿತರೆ ವಿಚಾರದ ಬಗ್ಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ವಾರ್ತಾ ಸಚಿವರಾಗಿರುವ ಸಿದ್ದರಾಮಯ್ಯರವರು ಗಮನ ಹರಿಸಬೇಕೆಂದು ಹೇಳಿದರು.

ನೂತನ ಜಿಲ್ಲಾಧ್ಯಕ್ಷರಾದ ನರಸಿಂಹ ಗೌಡರವರು ಮಾತಾನ್ನಾಡಿ, ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ಅಣತಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಪತ್ರಕರ್ತರ ಪರವಾಗಿ ಕಾನೂನಾತ್ಮಕ ಹೋರಾಟ ಮಾಡಲಿದ್ದೇನೆ ಎಂದು ಹೇಳಿದರು.

ರಾಜ್ಯ ಪ್ರದಾನ ಕಾರ್ಯದರ್ಶಿ ಅನಿಲ್ ಕುಮಾರ್ ರವರು ನೂತನ ಜಿಲ್ಲಾ ಪದಾಧಿಕಾರಿಗಳಿಗೆ ಶುಭಾಶಯ ಹೇಳಿದರು. ಅದೇ ರೀತಿಯಾಗಿ ದೂರವಾಣಿ ಮುಖೇನ ರಾಜ್ಯ ಗೌರವ ಕಾರ್ಯಧ್ಯಕ್ಷರಾದ ವೆಂಕಟ್ ಶಿವರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ಆಲಂ ಘನಿ, ರಾಜ್ಯ ಕಾರ್ಯಧ್ಯಕ್ಷರಾದ ಅಕ್ಮಲ್ ಪಾಷ, ರಾಜ್ಯ ಕಾರ್ಯದರ್ಶಿಯಾದ ಕೆ ವೆಂಕಟೇಶ್, ರಾಜ್ಯ ಸಂಚಾಲಕರಾದ ಕಾಟಯ್ಯ, ರಾಜ್ಯ ನಿರ್ದೇಶಕರಾದ ಸೌಭಾಗ್ಯ, ರಾಜ್ಯ ಗೌರವ ಸಂಘಟನೆ ಕಾರ್ಯದರ್ಶಿಯಾದ ಹರೀಶ್, ರಾಜ್ಯ ಸಂಘಟನೆ ಕಾರ್ಯದರ್ಶಿಯಾದ ಬಿ ಕುಮಾರಸ್ವಾಮಿ, ರಾಜ್ಯ ಮಾಧ್ಯಮ ಸಲಹೆಗಾರರಾದ ಆರ್ ವಿ ಕೃಷ್ಣ, ರಾಜ್ಯ ಮಾಧ್ಯಮ ವಕ್ತಾರಾದ ಮೋಸಿನ್ಆಲಿ ಮತ್ತು ರಾಜ್ಯ ಕಾನೂನು ಸಲಹೆಗಾರರಾದ ಸೋಮಶೇಖರ್ ರವರುಗಳು ನೂತನ ಪದಾಧಿಕಾರಿಗಳಿಗೆ (ದೂರವಾಣಿ ಮುಖೇನ) ಶುಭ ಹಾರೈಸಿದರು.

error: Content is protected !!