November 4, 2025

ಎಸ್. ಬಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮ ಕಾರ್ಯಕ್ರಮ..

ಕಲಕೇರಿ: ಎಸ್. ಬಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮ ಕಾರ್ಯಕ್ರಮ ಸರಳತೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಮುಖ್ಯಗುರುಗಳಾದ ಬಿ. ಎಸ್. ದೇವರಮನಿ ವಹಿಸದರು. ಇಂದು ಗುರು ಪೂರ್ಣಿಮ ಶುಭದಿನ. ಈ ದಿನದಂದು ನಮಗೆ ಜ್ಞಾನಾರ್ಜನೆ ಮಾಡಿ ದಾರಿ ದೀಪವಾಗಿ ನಿಂತ ಗುರುಗಳನ್ನು ಪೂಜಿಸುವ ಅವರನ್ನು ಸ್ಮರಿಸುವ ಪದ್ಧತಿಯಾಗಿದೆ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಎಸ್. ಪ್ರೌಢ ಶಾಲೆಯ ಕನ್ನಡ ಶಿಕ್ಷರಾದ ಎಸ್. ಪಿ. ರಾಣಗಟ್ಟಿ ಗುರುಗಳು ಗುರು ಪೂರ್ಣಿಮ ನಮ್ಮ ಭಾರತ ದೇಶದ ಸಂಸ್ಕೃತದಲ್ಲಿ ಅತ್ಯುನತ ಸ್ಥಾನವನ್ನು ಪಡೆದುಕೊಂಡಿದೆ. ಗುರು ಎಂಬ ಪದ ಸಂಸ್ಕೃತ ಭಾಷೆಯಿಂದ ಬಂದಿದೆ. ಗು ಎಂದರೆ ಅಜ್ಞಾನ ರು ಎಂದರೆ ಹೋಗಲಾಡಿಸುವುದು. ಅಂದರೆ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ತುಂಬುವುದು ಎಂದ ಅರ್ಥ ವನ್ನು ಕೊಡುತ್ತದೆ. ಇಂದು ಮಹಾಭಾರತ ವ್ಯಾಸರು ಭಾರತಕ್ಕೆ ಕೊಡಗೆ ನೀಡಿದ ದಿನ. ಅಜ್ಞಾನo ತಿವಿರಾದಸ್ಯ ಜ್ಞಾನಾoಜನ ಸಲಾಕಯ ಚಕ್ಷರಿನಿತo ಯನ್ನೇ ತಸ್ಮೈಶ್ರೀ ಗುರುವೇ ನಮಃ ಎಂಬ ಮಾತು ಬಹಳ ಸಂತ್ಯವಾದದು. ಗುರು ಬ್ರಹ್ಮ ಗುರು ವಿಷ್ಣು ಗುರುದೇವ ಮಹೇಶ್ವರ ಗುರು ಸಾಕ್ಷಾತ್ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಮಾತು ಇಂದು ಸತ್ಯವಾದುದಾಗಿದೆ ಎಂದು ಹೇಳಿದರು. ಶಾಲೆಯ ಸಿಬ್ಬಂದಿ ವರ್ಗದವರು ಶ್ರೀ ಮತಿ ಪ್ರಿಯಾ. ಮಣುರ. ಬಿಸ್ಮಿಲ್ಲಾ ಉಸ್ತಾದ್. ಬಿ. ಎಸ್. ಗುಡಿಮನಿ. ಕವಿತಾ. ನಂದನ. ಕಾಳಮ್ಮ. ಬಡಿಗೇರ. ನೀಲಮ್ಮ. ಸುಲೇಗಾಂವಿ. ಬಿ. ಎಸ್. ಬಿರಾದಾರ. ಸೌಮ್ಯ. ನೆಲ್ಲಗಿ ಇತರರು ಇದ್ದರು.

error: Content is protected !!