November 4, 2025

*ಏತ ನೀರಾವರಿ ಯೋಜನೆಯ ಕೊನೆ ಹಂತದ ಎಫ್‌ಐಸಿ (ಹೊಲಗಾಲುವೆ) ನಿರ್ಮಾಣಕ್ಕೆ ಆಗ್ರಹಿಸಿ 38 ಗ್ರಾಮಗಳ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ….*

ವಿಜಯಪುರ, ತಾಳಿಕೋಟಿ: ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಕೊನೆ ಹಂತದ ಎಫ್‌ಐಸಿ (ಹೊಲಗಾಲುವೆ) ನಿರ್ಮಾಣಕ್ಕೆ ಆಗ್ರಹಿಸಿ 38 ಗ್ರಾಮಗಳ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಕೊಡಗಾನೂರ ಗ್ರಾಮದ ಕ್ರಾಸ್ ಬಳಿ ನಡೆಯುತ್ತಿರುವ ಈ ಧರಣಿಗೆ ರೈತ ಮುಖಂಡರು, ಸಮಾಜ ಸೇವಕರು ಬೆಂಬಲ ಸೂಚಿಸಿದ್ದಾರೆ.

ಯೋಜನೆ ಶೇ.90ರಷ್ಟು ಪೂರ್ಣಗೊಂಡಿದ್ದು, ಕೇವಲ 10% ಕಾಮಗಾರಿ ಬಾಕಿ ಉಳಿದಿದೆ. ಈ ಕಾಮಗಾರಿಗೆ 170 ಕೋಟಿ ರೂ. ಅನುದಾನ ಬೇಕಾಗಿದ್ದು, ಕಾಲುವೆ ನಿರ್ಮಾಣವಾದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು. ಬೇಡಿಕೆ ಈಡೇರಿಸದಿದ್ದರೆ ಇನ್ನಷ್ಟು ಉಗ್ರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಪ್ರಭುಗೌಡ ಬಿರಾದಾರ (ಅಸ್ಕಿ), ಸುರೇಶಕುಮಾರ ಪೀರಾಪೂರ, ಸಾಹೇಬಗೌಡ ಯಾಳಗಿ ಅವರು ಮಾತನಾಡಿದರು. ನಾಡಿನ ಖ್ಯಾತ ನೇತ್ರ ತಜ್ಞ ಸಮಾಜ ಸೇವಕರು ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ, ಅಂಬೇಡ್ಕರ್ ಸೇನೆ ತಾಳಿಕೋಟಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಧರಣಿ ನಿರತರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಮಲ್ಲನಗೌಡ ಪೊಲೀಸ್ ಪಾಟೀಲ, ಅಶೋಕ ಅಸ್ಕಿ, ಶಂಕರಗೌಡ ದೇಸಾಯಿ, ಪ್ರಭುಗೌಡ ಬಿರಾದಾರ, ರಾಯನಗೌಡ ನೀರಲಗಿ, ಆನಂದಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ರಾಜುಗೌಡ ಇಬ್ರಾಹಿಂಪೂರ, ಶಿವಪುತ್ರ ಚೌದರಿ, ಗುರುರಾಜ ಪಡಶೆಟ್ಟಿ, ಬಸ್ಸು ಮಾದರ, ಗೋಪಾಲ್ ಕಟ್ಟಿಮನಿ, ರಾಮನಗೌಡ ಹಾದಿಮನಿ, ಸಂಗನಗೌಡ ಕೋಳೂರು ಹಾಗೂ ಶ್ರೀನಿವಾಸ್ ಗೊಟಗುಣಕಿ ಇದ್ದರು.

ಸಿಪಿಐ ಮೊಹಮ್ಮದ್ ಫಸೀವುದ್ದೀನ್ ಅವರ ನೇತೃತ್ವದಲ್ಲಿ ಪಿಎಸ್ಐ ಆರ್‌.ಎಸ್.ಭಂಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಜಿಲ್ಲಾ ವರದಿ : ಮೖಬೂಬಬಾಷ ಮನಗೂಳಿ.

error: Content is protected !!