*ವಿಜಯಪುರ ಜಿಲ್ಲೆಯ ಕಲಕೇರಿ ಪಟ್ಟಣದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಹೊರಟ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಿಗುತ್ತಿಲ್ಲ ಬೆಂಬಲ.*
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಾಜ ಅಹ್ಮದ್ ಸಿರಸಗಿ ಇವರು ಹಾಗೂ ಉಪಾಧ್ಯಕ್ಷೆ ಶ್ರೀ ಮತಿ ವಿಜಯಲಕ್ಷ್ಮಿ ಬೇಡರ ಹಾಗೂ ಅವರ 26 ಸದಸ್ಯರು ಸೇರಿ ಕಲಕೇರಿಯಲ್ಲಿ ಮಾರುಕಟ್ಟೆಗೆಂದು ಸೀಮಿತ ಜಾಗದಲ್ಲಿ ಸಿತಿಲಗೊಂಡ ಅಂಗಡಿಗಳನ್ನು ತೆರವುಗೊಳಿಸಿ ಹೊಸ ಕಟ್ಟಡದ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಪರದಾಟ ಮಾಡಿ ರಾಜಕೀಯ ಮೊರೆ ಹೋಗಿ, ಅಧಿಕಾರಿಗಳ ಮೊರೆ ಹೋಗಿ ಹಾಗೋ ಹೀಗೋ ಭೂಮಿ ಪೂಜೆ ಮಾಡಿ ಕಟ್ಟಡ ಮಾಡಬೆಕೇಂದರೆ ವಿಘ್ನ ಎನ್ನುವ ರೀತಿಯಲ್ಲಿ ಕಾಡಾಟಗಳು ಶುರುವಾಗಿದೆ.
ಏನಂದರೆ ಕನ್ನಡ ಶಾಲೆಯ ಅವರಣವನ್ನು ದಾನ ನೀಡಿದ ದಾನಿಗಳ ಮನೆಯವರಿಂದ ಕಟ್ಟಡ ಮಾಡಲು ಕುತ್ತು ಬಂದಿದೆ. ದಾನ ಮಾಡಿದ ಶಾಲೆಯ ಆವರಣದಲ್ಲಿ ಶಾಲೆಗೆ ಸೇರಲು 3 ದ್ವಾರಗಳು (ಗೆಟಗಳು) ಇದ್ದು ಒಂದು ಮುಖ್ಯ ಗೇಟ್ ನಮ್ಮ ವಾಣಿಜ್ಯ ಮಳಿಗೆಗಳ ರಸ್ತೆಗೆ ಹೊಂದಿಕೊಂಡು ಇರುತ್ತದೆ. ಇನ್ನೇರಡು ಗೇಟ್ ಊರಿನ ಪ್ರಮುಖ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಬಸಗಳನ್ನು ಹೋಗುವದಕ್ಕೆ ತೆರೆಯಲಾಗುತ್ತದೆ. ಅವು ನಿರ್ಮಾಣ ಮಾಡಿ ಸರಿ ಸುಮಾರು 90 ವರ್ಷಗಳು ಕಳೆದಿವೆ. ಆ ಗೇಟ್ಗಳನ್ನು ಭೂ ದಾನಿಗಳ ಮನೆತನದವರು ಎರಡು ಗೇಟಗಳನ್ನು ಕಲ್ಲು ಹಾಕಿ ಮುಚ್ಚಲು ಹೊರಟಿದ್ದಾರೆ. ಇದರಿಂದ ಜಾತ್ರೆಯ ಸಂದರ್ಭದಲ್ಲಿ ರಸ್ತೆಗೆ ಸಮಸ್ಯೆ ಆಗುತ್ತದೆ ಎಂದು 3 ಶಾಲಾ ಮುಖ್ಯೋಪಾಧ್ಯಾಯರು ಪಂಚಾಯಿತಿಗೆ ಗೇಟ್ ಮುಚ್ಚದಂತೆ ಮನವಿ ಮಾಡಿಕೊಂಡಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ತೆರವುಗೊಳಿಸಲು ಮುಂದಾಗಿದ್ದಾರೆ. ಸರ್ವ ಜನಾಂಗದ ಜನಕ್ಕೆ ಸ್ಪೂರ್ತಿಯ ಸಂಖೇತವಾಗಿ ಮುನ್ನುಗ್ಗಿದ್ದಾರೆ ಇವರುಗಳು ಇನ್ನೋಂದು ಪಂಚಾಯಿತಿಯ ಸದಸ್ಯರಿಗೆ ಮಾದರಿ ಆಗಲಿ ಎನ್ನುವುದು ನಮ್ಮ ಆಶಯ ಎಂದು ಸಾರ್ವಜನಿಕರು ಹೇಳುತ್ತಾರೆ.
ಅಧ್ಯಕ್ಷರಾದ ರಾಜ್ ಅಹ್ಮದ್ ಸಿರಸಗಿ, ಉಪಾಧ್ಯಕ್ಷೆಯ ಪತಿ ಪರಶುರಾಮ ಬೇಡರ, ಅನೀಲ ಬಡಿಗೇರ, ಸುಧಾಕರ ಅಡಕಿ, ನಬಿಲಾಲ ನಾಯ್ಕೋಡಿ, ಈರಗಂಟೆಪ್ಪ ಬಡಿಗೇರ, ಸಲಿಮ್ ನಾಯ್ಕೋಡಿ, ಕಾಶಿಮಸಾಬ ನಾಯ್ಕೋಡಿ, ಭೀಮಣ್ಣ ವಡ್ಡರ, ಎಲ್ಲಾ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಆನಂದ ಅಡಕಿ, ವಿಶ್ವನಾಥ್ ರಾಠೋಡ, ದೇವಿಂದ್ರ ಬಡಿಗೇರ,ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ