ಬೈಕ್ ಟ್ಯಾಕ್ಸಿ ಸೇವೆಗೆ ಕರ್ನಾಟಕ ರಾಜ್ಯ ಸರ್ಕಾರ ನಿಷೇಧ ಹೇರಿದ್ದು, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ವಾಣಿಜ್ಯೇತರ ಖಾಸಗಿ ಬೈಕ್ ಗಳನ್ನು ಬಳಸಿಕೊಂಡು ಅಗ್ರಿಗೇಟರ್ ಗಳು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು.
ಆದರೆ, ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯವೆಂದು ಕೇಂದ್ರ ಸರ್ಕಾರ ಹೇಳಿದ್ದು, ಮಂಗಳವಾರ ಈ ಕುರಿತಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿರುವುದು ಇದೇ ಮೊದಲು. ಖಾಸಗಿ ವಾಹನ ಬಳಸಿ ಅಗ್ರಿಗೇಟರ್ ಗಳು ಸೇವೆ ನೀಡಬಹುದು. ಇದಕ್ಕೆ ದೈನಂದಿನ, ವಾರ, ಮಾಸಿಕ ಅವಧಿಗೆ ಸರ್ಕಾರ ಶುಲ್ಕ ವಿಧಿಸಬಹುದು. ಇದರಿಂದ ಸಂಚಾರದಟ್ಟಣೆ, ಮಾಲಿನ್ಯ ನಿಯಂತ್ರಣ, ಅಗ್ಗದ ಪ್ರಯಾಣ ಸಾಧ್ಯ. ಸ್ಥಳೀಯ ಸಾರಿಗೆ ಅಭಿವೃದ್ಧಿ, ಜೀವನ ರೂಪಿಸುವ ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ.

        
                  
                  
                  
                  
More Stories
ಅಶ್ವಿನಿ ಮಾಸದ ಹುಣ್ಣಿಮೆಯ ದಿನದಂದು ಅಂದರೆ ಶೀಗಿ ಹುಣ್ಣಿಮೆಯ ದಿನದಂದು ಶ್ರೀರಾಮನ ಜೀವನ ಚರಿತ್ರೆಯನ್ನು ವಿವರಿಸುವ ರಾಮಾಯಣವನ್ನು ಬರೆದಂತಹ ಮಹಾನ್ ಮಹರ್ಷಿ ವಾಲ್ಮೀಕಿಯವರ ಜನ್ಮ ದಿನವಾಗಿ ವಾಲ್ಮೀಕಿ ಜಯಂತಿಯನ್ನು ನಡೆಸಲಾಗುತ್ತದೆ.
23-8-2025 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ರಾಜ್ಯ ಅಹಿಂದ ಚಳವಳಿ ಸಮಾವೇಶ…
ದಶಕಗಳ ಕಾಲ ಸಿನಿಮಾ ಪ್ರಿಯರನ್ನು ರಂಜಿಸಿದ್ದ ‘ಅಭಿನಯ ಸರಸ್ವತಿ’ ಹಿರಿಯ ನಟಿ ಬಿ. ಸರೋಜಾದೇವಿ ವಿಧಿವಶ🙏