November 4, 2025

ತಾಳಿಕೋಟಿ ತಹಶೀಲ್ದಾರ್ ದಂಡಾಧಿಕಾರಿಗಳ ಆಫೀಸಿಗೆ ಹಾಗೂ ರೈತ ಸಂಪರ್ಕ ಕೇಂದ್ರ ಆಫೀಸಿಗೆ ಮುತ್ತಿಗೆ ಎಚ್ಚರಿಕೆ; ರೈತ ಉಪಾಧ್ಯಕ್ಷ ಮೈಬೂಬಬಾಷ ಮನಗೂಳಿ

ವಿಜಯಪುರ ಜಿಲ್ಲಾ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ರೖತರ 2023 ರಿಂದ 2024 ಹಾಗೂ 2025ನೇ ಸಾಲಿನ ರೈತರ ಬೆಳೆ ವಿಮೆ ಹಾಗೂ ರೈತರ ಪರಿಹಾರ ಇಲ್ಲಿಯವರೆಗೂ ಯಾವ ರೈತರಿಗೂ ತಲುಪಿಲ್ಲ. ರೈತ ಈ ದೇಶದ ಬೆನ್ನೆಲುಬು ಅಂತ ಅನೇಕ ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆದರೆ ಈ ದೇಶದಲ್ಲಿ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ. ರೈತರು ಅಧಿಕಾರಿಗಳನ್ನು ಕೇಳಿದರೆ ಮೇಲಧಿಕಾರಿಗೆ ಕೇಳಿ ಎಂದು ಸಬೂಬು ಹೇಳುತ್ತಾರೆ. ದೇಶದ ಬೆನ್ನೆಲುಬು ಅಂದರೆ ರೈತ ಎಂದು ಅಧಿಕಾರಿಗಳು ರಾಜಕಾರಣಿಗಳು ದೊಡ್ಡ ದೊಡ್ಡ ಭಾಷಣಗಳನ್ನು ಹೇಳುತ್ತಾರೆ. ದೇಶದಲ್ಲಿ ರೈತ ಬೆಳೆದರೆ ನಾವೆಲ್ಲಾ ಎಂದು ಭಾಷಣದಲ್ಲಿ ಹೇಳಿ ರೈತರಿಗೆ ಕಸದಕಿಂತ ಕೀಳಾಗಿ ನೋಡುವಂತ ಅಧಿಕಾರಿಗಳು ರೈತರಿಗೆ ಸುಳ್ಳು ಆಶ್ವಾಸನೆ ನೀಡುತ್ತಾರೆ ಹಾಗೂ ತಾಳಿಕೋಟಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಎರಡರಿಂದ ಮೂರು ವರ್ಷಗಳ ಕಾಲ ಕಳೆದರು ರೈತರಿಗೆ ಬರುವಂತ ಸ್ಪ್ರಿಂಕ್ಲರ್ ಪೈಪುಗಳನ್ನು ಅಧಿಕಾರಿಗಳು ಇನ್ನೂ ಕೊಟ್ಟಿಲ್ಲ. ರೈತರು ಹೋಗಿ ಕೇಳಿದಾಗ ಬರುತ್ತವೆ ಎನ್ನು ಸುಳ್ಳು ಆಶ್ವಾಸನೆ ಕೊಡುತ್ತಾರೆ. ಈಗಾಗಲೇ ಹತ್ತಾರು ಸಲ ಮನವಿಯನ್ನು ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನದೆ ಉದಾಸೀನತೆ ತೋರಿದ್ದಾರೆ. ತಕ್ಷಣ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಳಿಕೋಟಿ ತಹಶೀಲ್ದಾರ್ ದಂಡಾಧಿಕಾರಿಗಳಿಗೆ ಆಫೀಸಿಗೆ ಹಾಗೂ ರೈತ ಸಂಪರ್ಕ ಕೇಂದ್ರ ಆಫೀಸ್ ಗೆ ಮುತ್ತಿಗೆ ಹಾಕುತ್ತೇವೆ. ಎಂದು ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೖಬೂಬಬಾಷ ಮನಗೂಳಿ ಪತ್ರಿಕೆಗೋಷ್ಠಿಯಲ್ಲಿ ತಿಳಿಸಿದ್ದಾರೆ.

error: Content is protected !!