November 4, 2025

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ !ರಾಜ್ಯದ ಎಲ್ಲಾ ಶಾಲೆಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ …

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಗೈಡ್ ಲೈನ್ಸ್ ರಿಲೀಸ್ ಮಾಡಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಜ್ವರ ಇದ್ದರೆ ಶಾಲೆಗೆ ಕಳುಹಿಸಬಾರದು. ಸಂಪೂರ್ಣವಾಗಿ ಗುಣಮುಖರಾದ ಮೇಲೆ ಶಾಲೆಗೆ ಕಳುಹಿಸಬೇಕು. ಕೋವಿಡ್ ಲಕ್ಷಣ ಇರುವ ಮಕ್ಕಳು ಶಾಲೆಗೆ ಬಂದರೆ ಮನೆಗೆ ಕಳುಹಿಸಬೇಕು. ಶಾಲಾ ಸಿಬ್ಬಂದಿಯಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್, ತುರ್ತು ಐಸಿಯು ಬೆಡ್ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ವೆಂಟಿಲೆಟರ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಕೋವಿಡ್ ಸಂಬಂಧಿಸಿದ ಉಪಕರಣಗಳುನ್ನು ಸಿದ್ದಪಡಿಸಿ ಇಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ.

1) ಜ್ವರ , ಕೆಮ್ಮು ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು , ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಕಳುಹಿಸಬೇಕು

2) ಕೋವಿಡ್ ಲಕ್ಷಣ ಇರುವ ಮಕ್ಕಳು ಶಾಲೆಗೆ ಬಂದರೆ ಕೂಡಲೇ ಮನೆಗೆ ಕಳುಹಿಸಬೇಕು

3) ಶಾಲಾ ಸಿಬ್ಬಂದಿ, ಶಿಕ್ಷಕರಲ್ಲಿ ಕೋವಿಡ್ ಲಕ್ಷಣ ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಿ

4) ಶಾಲೆಗಳಲ್ಲಿ ಸ್ವಚ್ಚತೆ ಹಾಗ ಕೋವಿಡ್ ನಿಯಮ ಪಾಲನೆ ಕಡ್ಡಾಯ.

error: Content is protected !!