November 4, 2025

ಜನಗಣತಿ ನಡೆಯುತ್ತಿದ್ದು ನಮ್ಮೆಲ್ಲ ವಾಲ್ಮೀಕಿ ನಾಯಕ ಸಮಾಜ ಬಂಧುಗಳು ನಿಖರವಾದ ಜಾತಿಗಳನ್ನು ಬರಿಸಬೇಕಾಗಿ ವಿನಂತಿ

ಪರಿಶಿಷ್ಟ ಪಂಗಡದ ಕ್ರಮ ಸಂಖ್ಯೆ 38ರ ಪಟ್ಟಿಯಲ್ಲಿ ಬರುವ ನಾಯಕ್ಡ, ನಾಯಕ ಈ ಜಾತಿಯು ಪೂರ್ವದಿಂದಲೂ ಪರಿಶಿಷ್ಟ ಪಂಗಡಪಟ್ಟಿಯಲ್ಲಿ ಇತ್ತು ಆನಂತರ 1991ರಲ್ಲಿ ನಾಯಕಡ್ ನಾಯಕ ಜಾತಿಯ ಪರ್ಯಾಯ ಪದಗಳಾಗಿ ವಾಲ್ಮೀಕಿ, ವಾಲ್ಮೀಕಿ ಮಕ್ಕಳು, ಬೇಡ ,ದೊರೆ, ದೊರೆ ಮಕ್ಕಳು ಇವೆಲ್ಲ ಹೆಸರುಗಳನ್ನು ಸೇರಿಸಲಾಗಿದೆ ಆದರೆ ನಮ್ಮ ಹಿರಿಯರು ಬುದ್ಧಿಜೀವಿಗಳು ಜಾತಿಯ ಕಾಲಂ ನಲ್ಲಿ ಯಾವ ರೀತಿ ಬರಿಸಿದರೆ ಸರಿಹೋಗುತ್ತದೆ ಎಂಬುದನ್ನು ಒಂದು ಹೇಳಿಕೆಯನ್ನು ಕೊಡಬೇಕಾಗಿ ನಾನು ವಿನಂತಿ ಮಾಡುತ್ತಿದ್ದೇನೆ,

ನಮ್ಮ ಜನಾಂಗದವರು ಕೆಲವೊಬ್ಬರು ನಾಯಕ, ವಾಲ್ಮೀಕಿ, ಬೇಡ, ಬೇಡರ ಮತ್ತು ಎಂದು ಬರಿಸುತ್ತಾರೆ ಆದರೆ ಇವೆಲ್ಲ ಮುಖ್ಯ ಜಾತಿಗಳಾಗಿರುತ್ತವೆ, ಆದರೂ ಕೂಡ ನಮ್ಮ ಜನಾಂಗದವರು ಒಂದೇ ಜಾತಿಯನ್ನು ಬರೆಯಿಸಿದರೆ ಬಹಳ ಅನುಕೂಲವಾಗುತ್ತದೆ

ಆದ್ದರಿಂದ ಎಲ್ಲಾ ಬುದ್ಧಿಜೀವಿಗಳು ವಿಚಾರವಾದಿಗಳು ಎಲ್ಲವನ್ನು ತೂಕಕ್ಕೆ ಹಾಕಿಕೊಂಡು ಒಂದು ಹೇಳಿಕೆಯನ್ನು ಕೊಡಬೇಕು ಎಂದು ಗಂಗಾಧರನಾಯಕ ತಿಂಥಣಿ ವಿನಂತಿ ಮಾಡಿದರು.

*ವರದಿ – ಹುಲಗಪ್ಪ ಎಂ ಹವಾಲ್ದಾರ್*

error: Content is protected !!