*ಶರಾವತಿ ಕಣಿವೆಯ ಕೆಪಿಸಿ ಉದ್ಯೋಗಿಗಳ ಕಾರ್ಮಿಕ ಸಂಘಟನೆಗಳಲ್ಲಿ 1985 ರ ಕಾಲಘಟ್ಟದಲ್ಲಿ ಭಾರತೀಯ ಮಜ್ದೂರ್ ಸಂಘದ ಮೂಲಕ ದುಡಿಯುವ ವರ್ಗದ ಹಕ್ಕಿಗಾಗಿ ದುಡಿದ ಕಾರ್ಮಿಕ ನಾಯಕ ಪೌಲ್ .ಪಿ. ಫರ್ನಾಂಡೀಸ್ ಇಂದು (05-05-2025 ) ಶಾಶ್ವತ ವಿಶ್ರಾಂತಿಯನ್ನು ಪಡೆದಿದ್ದಾರೆ. ಕೆಪಿಸಿ ಉದ್ಯೋಗಿಗಳ ನ್ಯಾಯಯುತ ಹಕ್ಕಿಗಾಗಿ ಆ ದಿನಗಳಲ್ಲಿ ನಂಜುಂಡಸ್ವಾಮಿ, ನಾಗೇಂದ್ರ ರೆಡ್ಡಿ, ಕೆ. ಶ್ರೀನಿವಾಸ, ಶೇಖರಪ್ಪ, ಸಿ.ಆರ್. ಪಾಟೀಲ್, ತೋಪನಗೌಡರು ಮುಂತಾದ ಹಲವು ನಾಯಕರೊಂದಿಗೆ ಕೆಪಿಸಿ ಎಂಪ್ಲಾಯೀಸ್ ಯೂನಿಯನ್ ಜೊತೆ ಜೊತೆಯಲ್ಲಿಯೇ ಭಾರತೀಯ ಮಜ್ದೂರ್ ಸಂಘದ ಪ್ರತಿನಿಧಿಗಳಾಗಿ ಪೌಲ್ .ಪಿ. ಫರ್ನಾಂಡೀಸ್ ಮತ್ತು ಬಿ.ಎಸ್. ಯಶೋಧರ ಇಂದ್ರ ಜೊತೆಗೂಡಿದ್ದು, ಶರಾವತಿ ಕಣಿವೆಯ ಕಾರ್ಮಿಕ ಹೋರಾಟಗಳಲ್ಲಿ ಕಂಡು ಬಂದ ಹೆಜ್ಜೆ ಗುರುತಾಗಿತ್ತು. ಕೆಪಿಸಿ ಸೇವೆಯಲ್ಲಿದ್ದ ಕಾಲದಲ್ಲಿಯೇ 1980 ರಲ್ಲಿ ಯು.ಎಂ. ಸತ್ಯನಾರಾಯಣ ಅವರ ಒಡಗೂಡಿ ಕನ್ನಡ ಸಂಘದ ಬೆಳವಣಿಗೆ, ಅಭಿವೃದ್ಧಿ, ಕನ್ನಡ ಪರ ಹೋರಾಟಗಳಲ್ಲಿಯೂ ಸಕ್ರಿಯವಾಗಿ ಪೌಲ್ ಪಿ. ಫರ್ನಾಂಡೀಸ್ ರವರು ಪಾಲ್ಗೊಂಡದ್ದು ಕನ್ನಡ ಸಂಘ ನಡೆದು ಬಂದ ಹಾದಿಯಲ್ಲಿ ಕಂಡು ಬರುವ ಚಿತ್ರಣಗಳಾಗಿದೆ. ಸೇವಾ ನಿವೃತ್ತ ಜೀವನದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸುಮಾರು 13 ವರ್ಷಗಳ ಕಾಲ ನಡೆದು ಬಂದಿದ್ದರು. ನೇರ ನಡೆ ನುಡಿಯ ನಿಷ್ಠುರ ವಾದಿಯಾಗಿದ್ದ ಪೌಲ್ ಪಿ ಫರ್ನಾಂಡೀಸ್ ರವರು ತಮ್ಮದೇ ಆದ ಶೈಲಿಯಲ್ಲಿ ಶರಾವತಿ ಕಣಿವೆಯಲ್ಲಿ ಗುರುತಿಸಿಕೊಂಡವರು. ಪತ್ನಿ, ಮಗ, ಮಗಳನ್ನು ಅಗಲಿ ಚಿರ ಶಾಂತಿಯನ್ನು ಅರಸಿ ಹೊರಟಿರುವ ಪೌಲ್ ಮಾಮ್ ಇನ್ನು ನೆನಪು ಮಾತ್ರ. ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ, ಮೃತರ ಅಗಲಿಕೆಯಿಂದ ನೊಂದ ಕುಟುಂಬ ವರ್ಗಕ್ಕೆ ದುಖ: ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾ ನಮ್ಮ ನೆಚ್ಚಿನ ಪೌಲ್ ಮಾಮ್ ಗೊಂದು ಸಲಾಂನೊಂದಿಗೆ, ಅಕ್ಷರ ನುಡಿ ನಮನವನ್ನು ಅರ್ಪಿಸುತ್ತಿದ್ದೇವೆ.* ✍🏼👋

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…