November 4, 2025

*ಶಿಕಾರಿಪುರ ಸಂತೆ ಮಾರುಕಟ್ಟೆಯಲ್ಲಿ ಮುಚ್ಚದ ಗುಂಡಿಯಿಂದ ಅನಾಹುತ ಸಂಭವಿಸಿದ್ದರೂ ಗಮನ ಹರಿಸದ ಪುರಸಭೆಯ ಅಧಿಕಾರಿಗಳು…

ಶಿಕಾರಿಪುರ ಸಂತೆ ಮಾರ್ಕೆಟ್ ನೋಡಿ. 20-25 ಕೋಟಿ ರೂ.ಕಾಮಗಾರಿ ನಡೆಯುವ ಜಾಗದಲ್ಲಿ ಸಂತೆ ನಡೆಯುತ್ತದೆ.ಸುಮಾರು 7-8 ತಿಂಗಳಾಯಿತು.ಇನ್ನೂ ಒಂದು ವರ್ಷ ಕಾಮಗಾರಿ ನಡೆಯಬಹುದು. ಆದರು ಪುರಸಭೆಯವರು ಕಾಮಗಾರಿ ಮುಗಿಯುವ ವರೆಗೂ ಬೇರೆಕಡೆ ಸಂತೆ ನಡೆಸ ಬಹುದು.ದೊಡ್ಡ ಪ್ರಮಾಣದಲ್ಲಿ ಅನಾಹುತ ನಡೆದರೂ ಕೂಡ ಪುರಸಭೆ ಗಮನ ಹರಿಸಿಲ್ಲ.

ಈ ದಿನ ವ್ಯಾಪಾರಕ್ಕೆ ಬಂದವರು ಇಬ್ಬರು ಕೊಳಚೆ ಮಣ್ಣಿಂದ ಜಾರಿ 10 ಅಡಿ ಗುಂಡಿನಲ್ಲಿ ಬಿದ್ದಿರುತ್ತಾರೆ.ಅಲ್ಲಿಯ ಜನರು ಸೇರಿ ಹೊರ ತೆಗೆದಿರುತ್ತಾರೆ. ಇದೆ ರೀತಿ ದುರಂತ ನಡೆದಿದೆ.ಒಂದು ಹಸು ಕೂಡ ಗುಂಡಿನಲ್ಲಿ ಬಿದ್ದಿರುತ್ತದೆ.

ಈ ದಿನ ವ್ಯಾಪಾರಸ್ತರು 12 ಘಂಟೆ ಆದರೂ ತರಕಾರಿ ಮಾರಾಟಕ್ಕೆ ತರಕಾರಿ ಹಚ್ಚಲು ಮಣಕಾಲ್ ವರೆಗೂ ಕೊಳಚೆ ಮಣ್ಣನ್ನು ಕ್ಲೀನ್ ಮಾಡುತ್ತಿದ್ದಾರೆ ಬಿಸಿಲಿನಿಂದ ಜಾಗ ಒಣಗಿದಮೇಲೆ ತರಕಾರಿ ಮಾರಾಟಕ್ಕೆ ಹಚ್ಚುತಿದ್ದಾರೆ.

ಹತ್ತಾರು ಬಾರಿ ಪತ್ರಿಕೆಯಲ್ಲಿ ಬಂದರೂ ಕೂಡ ಪುರಸಭೆಯವರು ತಹಶಿಲ್ದಾರವರು ಮತ್ತು ತಾಲೂಕಿನ ಎಮ್ ಎಲ್ ಎ.ಮತ್ತು ಎಂ.ಪಿ.ಯವರುಕೂಡ ಗಮನ ಹರಿಸುತ್ತಿಲ್ಲ.

ತುಂಬಾ ಅನಾಹುತ ನಡೆದಾಗ ಸಾಂತ್ವನ ಹೇಳಲು ಮುಂದಾಗುತ್ತಾರೆ.

ಚಂದ್ರಕಾಂತ್ ಎಸ್ ರೆವಣಕರ್.ಅಧ್ಯೆಕ್ಷರು ಆಮ್ ಆದ್ಮಿ ಪಾರ್ಟಿ.ಶಿಕಾರಿಪುರ ತಾಲೂಕು.

ಮೊ-9964551897.

error: Content is protected !!