November 4, 2025

ಯಾದಗಿರಿ ನಗರದಲ್ಲಿ ಕರವೇ ವತಿಯಿಂದ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿ ಆಚರಣೆ.

ಯಾದಗಿರಿ: ನಗರದಲ್ಲಿ ಕರವೇ ವತಿಯಿಂದ ಕಾಯಕವೇ ಕೈಲಾಸ ಎಂದು ವಿಶ್ವಕ್ಕೆ ಸಾರುವುದರ ಜೊತೆಗೆ ಸಮಾನತೆಗಾಗಿ ಹೋರಾಡಿದ ೧೨ ನೇ ಶತಮಾನದ ಮಹಾನ್ ಕ್ರಾಂತಿ ಪುರುಷ ಬಸವಣ್ಣನವರು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ೮೯೨ನೇ ಬಸವಣ್ಣ ಜಯಂತಿಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪಾರ್ಚಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿ ಬಸವಣ್ಣನವರು ಸಮಗ್ರ ಕ್ರಾಂತಿಯ ಯುಗಪುರುಷ. ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಇವರು ಕೇವಲ ವಚನಕಾರರಲ್ಲದೆ ಶ್ರೇಷ್ಠ ಆರ್ಥಿಕ ತಜ್ಞರು, ವಿಚಾರವಾಧಿ ಹಾಗೂ ಸಮಾನತಾವಾದಿ ಆಗಿದ್ದರು.

ಅನುಭವ ಮಂಟಪವನ್ನು ಸ್ಥಾಪಿಸಿ ಶಿವಶರಣರನ್ನು ಬೆಳಿಸಿದರು. ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿ ಅನುಭವ ಮಂಟಪದಲ್ಲಿ ಭಾಗವಹಿಸಲು ಶರಣೆ ಅಕ್ಕಮಹಾದೇವಿಗೆ ಅವಕಾಶ ನೀಡುವುದರ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಿದವರೆಂದು ಹೇಳಿದರು.

ಈ ಸಂಧರ್ಭದಲ್ಲಿ ಕರವೇ ಮುಖಂಡರರಾದ ಮಲ್ಲು ಮಾಳಿಕೇರಿ, ಸಾಹೇಬಗೌಡ ನಾಯಕ ಗೌಡಗೇರಾ, ವಿಶ್ವರಾಜ ಪಾಟೀಲ್, ಸಿದ್ದಲಿಂಗರೆಡ್ಡಿ ಮುನಗಲ್, ಕಾಶಿನಾಥ ನಾನೇಕ, ಮರೆಪ್ಪ ಕಡ್ಡಿ, ಹಣಮಂತ ದೊರೆ, ಮಲ್ಲೇಶನಾಯಕ ಕಪ್ಪನೋರ್, ಬಸ್ಸು ಪರಸನಾಯಕ, ನಾಗರಾಜ ಪಿಲ್ಲಿ, ಆನಂದ, ಸಾಬು ನಾಯಕ, ಧವನ್ ನಾಯಕ ಕಪ್ಪನೋರ್, ರಮೇಶ.ಡಿ.ನಾಯಕ, ಹಾಗೂ ಇನ್ನೂ ಅನೇಕ ಕಾರ್ಯಕರ್ತರರು ಭಾಗಿಯಾಗಿದ್ದರು.

*ವರದಿ – ಹುಲಗಪ್ಪ ಎಂ ಹವಾಲ್ದಾರ್*

error: Content is protected !!