November 4, 2025

ಸ್ಯಾಟಲೈಟ್ ಸಿಟಿ ರಿಂಗ್ ರೋಡ್ ; ಭೂಮಿಗೆ ಭಾರೀ ಡಿಮ್ಯಾಂಡ್

ಬೆಂಗಳೂರಿಗೆ ಸುತ್ತಲೂ ಹಾಗೂ ಹೊಂದಿಕೊಂಡಿರುವ ನಗರಗಳಾದ ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಸೇರಿ 12 ಸ್ಯಾಟಲೈಟ್ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ರಿಯಲ್ ಎಸ್ಟೇಟ್‌ ಬೆಳವಣಿಗೆಗೂ ಕಾರಣವಾಗಿದೆ. ಈ ಭಾಗಗಳಲ್ಲಿ ಬೆಂಗಳೂರಿನ ಕೇಂದ್ರಭಾಗಕ್ಕಿಂತ ಭೂಮಿ ಹೆಚ್ಚು ಕೈಗೆಟುಕುವ ದರಕ್ಕೆ ಸಿಗುತ್ತಿದೆ. ಈ ಉಪನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳು, ಪ್ಲಾಟ್‌ಗಳ ಅಭಿವೃದ್ಧಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಈ ರಿಂಗ್ ರೋಡ್ ಯೋಜನೆಯು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರಿ ಸಾಥ್‌ ನೀಡುತ್ತಿದೆ.

ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜಿಸಲಾಗಿರುವ ತಮಿಳುನಾಡಿನ ಹೊಸೂರಿಗೆ ಸಹ ನೇರ ಮಾರ್ಗವನ್ನು ಒದಗಿಸುತ್ತದೆ. ಈ ಎಕ್ಸ್‌ಪ್ರೆಸ್‌ವೇ ದಾಬಸ್‌ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಶುರುವಾಗಿ ಬೆಂಗಳೂರಿನ ಸುತ್ತಲೂ ಸುತ್ತುತ್ತದೆ. ಬಳಿಕ ಅದೇ ಕಾರಿಡಾರ್‌ಗೆ ಮತ್ತೆ ಸಂಪರ್ಕ ಕಲ್ಪಿಸುತ್ತದೆ. ಸದ್ಯ ಕೆಲವೆಡೆ ಈ ರಸ್ತೆ ಕಾಮಗಾರಿ ಪೂರ್ಣಗೊಂಡು ವಾಹನಗಳ ಬಳಕೆಗೆ ಮುಕ್ತವಾಗಿದೆ. ಇನ್ನೂ ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, 2027ರ ವೇಳೆಗೆ ಸಂಪೂರ್ಣವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.ಸ್ಯಾಟಲೈಟ್ ರಿಂಗ್ ರೋಡ್ ಯೋಜನೆಯ ಮೊದಲ ಹಂತವು ಎರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ಮೊದಲ ಹಂತದಲ್ಲಿ ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 80 ಕಿ.ಮೀ ಅಳತೆಯ ಎರಡು ಪ್ಯಾಕೇಜ್‌ಗಳ ಕಾಮಗಾರಿ ಮುಗಿದಿತ್ತು. ಈ ಹೆದ್ದಾರಿಯಿಂದಾಗಿ ಬೆಂಗಳೂರಿನ ಸಂಪರ್ಕವಿಲ್ಲದೆ ನೇರವಾಗಿ ಚೆನ್ನೈ ತಲುಪಬಹುದಾಗಿದೆ. ಈ ಹೊಸ ರಸ್ತೆ ನಿರ್ಮಾಣವಾದ ಬಳಿಕ ಅಕ್ಕಪಕ್ಕದ ಭಾಗಗಳಲ್ಲಿ ಭೂಮಿ ಖರೀದಿ ಹೆಚ್ಚಾಗಿದ್ದು, ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಬಿಲ್ಡರ್‌ಗಳು ಕೂಡ ಈ ರಸ್ತೆಗೆ ಸಮೀಪದಲ್ಲೇ ಹೊಸ ಪ್ರಾಜೆಕ್ಟ್‌ಗಳಿಗೆ ಕೈಹಾಕುತ್ತಿದ್ದಾರೆ.

ಬೆಂಗಳೂರನ್ನು ಸುತ್ತುವರೆದಿರುವ ಸುಮಾರು 288 ಕಿ.ಮೀ ಎಕ್ಸ್‌ಪ್ರೆಸ್‌ವೇ, ಇದು ಅಂತರರಾಜ್ಯ ಪ್ರಮುಖ ಕಾರಿಡಾರ್ ಕೂಡ ಆಗಿದ್ದು, ಪಟ್ಟು ವ್ಯಾಪ್ತಿಯಲ್ಲಿ ಕರ್ನಾಟಕದಲ್ಲಿ 243 ಕಿ.ಮೀ ಹಾಗೂ ತಮಿಳುನಾಡಿನಲ್ಲಿ 45 ಕಿ.ಮೀ ಹಾದು ಹೋಗಿದೆ. ಆರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಂಟು ರಾಜ್ಯ ಹೆದ್ದಾರಿಗಳನ್ನು ಈ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಸಂಪರ್ಕಿಸುತ್ತದೆ. ಮುಖ್ಯವಾಗಿ ಇದು ಬೆಂಗಳೂರಿನ ಉಪನಗರಗಳು ಮತ್ತು ಪ್ರಮುಖ ಕೈಗಾರಿಕಾ ಪ್ರದೇಶಗಳ ನಡುವೆ ಪ್ರಯಾಣ ಸುಲಭಗೊಳಿಸಿದೆ.

ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ 12 ನಗರಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ ಇದು ತಮಿಳುನಾಡಿನ ಹೊಸೂರಿನವರೆಗೂ ವಿಸ್ತರಣೆಯಾಗಿದೆ. ಹೊಸಕೋಟೆ ಬಳಿಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೂ ಕೂಡ ಇದು ಸಂಪರ್ಕ ಕಲ್ಪಿಸುತ್ತದೆ.

error: Content is protected !!