ಪ್ರಿಯ ಓದುಗರೇ,
ಅಹಿಂದ ಬಂಧು ಪತ್ರಿಕೆಯ ಸಂಪಾದಕರು ಆದ ನಾನು ಈ ದಿನ ತಿಳಿಸಬಯಸುವುದೇನೆಂದರೆ, ಭೀಮನಗೌಡ ಎಂಬುವವರನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವರದಿಗಾರರಾಗಿ ದಿನಾಂಕ 30-09-2024 ರಿಂದ 31-08-2025ರ ವರೆಗೆ ನೇಮಕ ಮಾಡಲಾಗಿತ್ತು.
ಆದರೆ ಇವರು ಇಲ್ಲಿಯವರೆಗೂ ಯಾವುದೇ ಸುದ್ದಿಗಳನ್ನಾಗಲೀ, ಯಾವುದೇ ವರದಿಗಳನ್ನಾಗಲೀ ನಮ್ಮ ಅಹಿಂದ ಬಂಧು ಪಾಕ್ಷಿಕ ಪತ್ರಿಕೆಗೆ ನೀಡಿರುವುದಿಲ್ಲ. ಆದ ಕಾರಣ ನಮ್ಮ ಅಹಿಂದ ಬಂಧು ಕನ್ನಡ ಪಾಕ್ಷಿಕ ಪತ್ರಿಕೆಯಿಂದ ಭೀಮನಗೌಡ ಅವರನ್ನು ವಜಾ (ತೆಗೆದುಹಾಕಲಾಗಿದೆ) ಮಾಡಲಾಗಿದೆ. ಹಾಗೂ ಇವರಿಗೆ ನೀಡಿರುವ ನಮ್ಮ ಅಹಿಂದ ಬಂಧು ಪಾಕ್ಷಿಕ ಪತ್ರಿಕೆಯಿಂದ ನೀಡಿದ್ದ ಗುರುತಿನ ಕಾರ್ಡ್ (Identy Card) ಅವಧಿಯು ದಿನಾಂಕ; 31/08/2025 ರಂದು ಮುಗಿದಿರುತ್ತದೆ . ಇನ್ನು ಮುಂದೆ ನಮ್ಮ ಅಹಿಂದ ಬಂಧು ಪಾಕ್ಷಿಕ ಪತ್ರಿಕೆಗೂ ಸುರಪುರ ತಾಲ್ಲೂಕಿನ ಈ ಭೀಮನಗೌಡ ಎಂಬ ವ್ಯಕ್ತಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ದರಿಂದ ಇನ್ನು ಮುಂದೆ ಯಾರೂ ಇವರಿಗೆ ಜಾಹೀರಾತುಗಳಾಗಲೀ, ಯಾವುದೇ ಸುದ್ದಿಯನ್ನಾಗಲೀ ಹಾಗೂ ಯಾವುದೇ ಹಣದ ವ್ಯವಹಾರವಾಗಲೀ ನೀಡಬಾರದೆಂದು ಈ ಮೂಲಕ,
ಹಾಗೆಯೇ ನಮ್ಮ ಪತ್ರಿಕೆಯ ಹೆಸರು ಹೇಳಿ ಯಾರಿಗಾದರೂ ತೊಂದರೆ ಮಾಡಿದಲ್ಲಿ ತಕ್ಷಣ ಹತ್ತಿರದ ಆರಕ್ಷಕ ಠಾಣೆಗೆ ದೂರು ನೀಡಬೇಕೆಂದು ಈ ಮೂಲಕ ತಿಳಿಯಬಯಸುತ್ತೇನೆ .
ಇದು ಪತ್ರಿಕೆಯ ಪ್ರಕಟಣೆ ಯಾಗಿರುತ್ತದೆ.
– ಕುಮಾರಸ್ವಾಮಿ. ಬಿ
(ಸಂಪಾದಕರು ಮತ್ತು ಪ್ರಕಾಶಕರು).
ಅಹಿಂದ ಬಂಧು ಕನ್ನಡ ಪಾಕ್ಷಿಕ ಪತ್ರಿಕೆ .

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ