*ಅಶೋಕ ನಗರದಲ್ಲಿ ಮಹಾತ್ಮ ಗೌತಮ್ ಬುದ್ಧರ ಭಾವಚಿತ್ರ ಉದ್ಘಾಟನೆ ಹಾಗೂ 69ನೇ ಧಮ್ಮ ಚಕ್ರ ಪ್ರವರ್ತನಾ ದಿನ*
ಯಾದಗಿರಿಯ ಅಶೋಕ ನಗರದಲ್ಲಿರುವ ಸರ್ವೆ ನಂಬರ್ 29ರ ರಲ್ಲಿ ಬುದ್ಧ ವಿಹಾರಕ್ಕಾಗಿ ಮಂಜೂರಿಯಾದ ಜಮೀನಿನಲ್ಲಿ ದಿನಾಂಕ 14-10-2025 ಮಂಗಳವಾರದಂದು ಬೆಳಗ್ಗೆ 10 ಗಂಟೆಗೆ ಮಹಾತ್ಮ ಗೌತಮ್ ಬುದ್ಧರ ಭಾವಚಿತ್ರ ಉದ್ಘಾಟನೆ ಹಾಗೂ 69ನೇ ಧಮ್ಮ ಚಕ್ರ ಪ್ರವರ್ತನಾ ದಿನ ಅಂಗವಾಗಿ ಭಂತೆಜಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ರಾಯಚೂರು ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ್ ಚಿಂಚನಸೂರ ಯಾದಗಿರಿ ಮತಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಭಾರತೀಯ ಬೌದ್ಧ ಮಹಾ ಸಭಾದ ಉತ್ತರ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮನೋಹರ ಮೋರೆ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಬಿ ಸೋಮಶೇಖರ ಸೇರಿದಂತೆ ಅನೇಕರು ಭಾಗವಹಿಸಲಿದ್ದು
ಇಡಿ ಜಿಲ್ಲೆಯಾದ್ಯಂತ ಎಲ್ಲಾ ಬೌದ್ಧ ಉಪಾಸಕ ಹಾಗೂ ಉಪಾಸಕೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದುಮಲ್ಲಿಕಾರ್ಜುನ ಎಂ ಕ್ರಾಂತಿ
ರಾಜ್ಯ ಸಂಘಟನಾ ಸಂಚಾಲಕರು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
ಕ್ರಾಂತಿಕಾರಿ ಬಣ ಬೆಂಗಳೂರು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ವರದಿ 👉
ಎಚ್ ಎಮ್ ಹವಾಲ್ದಾರ
ಅಹಿಂದ ಬಂದು ಪತ್ರಿಕೆ, ಯಾದಗಿರಿ

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ