November 4, 2025

ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ನಿಜಗುಣ ದೊರನಹಳ್ಳಿ ಶಿಕ್ಷಣ ಸಚಿವರಿಗೆ ಮನವಿ…

*ದೊರನಹಳ್ಳಿ ಗ್ರಾಮಕ್ಕೆ ಕನ್ಯಾ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ ನಿಜಗುಣ ದೊರನಹಳ್ಳಿ ಶಿಕ್ಷಣ ಸಚಿವರಿಗೆ ಮನವಿ*

 

.ಬೆಂಗಳೂರು ಸದಾಶಿವ ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಮದು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಯುವ ಮುಖಂಡ‌ ನಿಜಗುಣ ದೋರನಹಳ್ಳಿ ಬೇಟಿ ಮಾಡಿ,  ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮ ಹೋಬಳಿ ಕೇಂದ್ರ ವಾಗಿದ್ದು ದೋರನಹಳ್ಳಿ ಗ್ರಾಮದಲ್ಲಿ ಐದು ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢ ಶಾಲೆ ಇದ್ದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಇದ್ದು ಈ ಶಾಲೆಯಲ್ಲಿ ಎ ಬಿ ಸಿ ತರಗತಿ ಮಾಡಿದ್ದು ಮತ್ತು ಈ ಶಾಲೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಅಂದರೆ ಗುಂಡಳ್ಳಿ ಗುಂಡಳ್ಳಿ ತಾಂಡ ಇಬ್ರಾಹಿಂಪುರ ಹಬ್ಬಳ್ಳಿ ಹುರಸಗುಂಡಗಿ ಬಿದರಾಣಿ ಮತ್ತು ವಿವಿದ ಗ್ರಾಮಗಳಿಂದ ದಿನಾಲೂ ಮಕ್ಕಳು ದೊರನಹಳ್ಳಿ ಪ್ರೌಢ ಶಾಲೆಗೆ ಬರುತ್ತಿದ್ದು  ಶೈಕ್ಷಣಿಕವಾಗಿ ತುಂಬಾ ತೊಂದರೆಯಾಗುತ್ತಿದೆ ಪ್ರೌಡ ಶಾಲೆ ಮುಗಿಸಿ ಮುಂದಿನ ವಿದ್ಯಾಬ್ಯಾಸ ಮಾಡಲು ಗ್ರಾಮದಿಂದ ದಿನಾಲು 300 & 400 ಮಕ್ಕಳ ಯಾದಗಿರಿ ಶಹಾಪೂರ ಸುರಪೂರಕ್ಕೆ ಹೋಗುತ್ತಿದ್ದು ಇದರಿಂದ ಮಕ್ಕಳಿಗೆ ಶೈಕ್ಷಣಿಕ ವಾಗಿ ತುಂಬಾ ತೊಂದರೆ ಅಗುತ್ತಿದ್ದು ಇದನ್ನು ಗಂಬಿರಬಾಗಿ ಪರಿಗಣಿಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ  ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಹಾಗೂ ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಚನ್ನಾರಡ್ಡಿ ಪಾಟೀಲ್ ತುನ್ನೂರ ರವರು ಮತ್ತು ರಾಯಚೂರು ಯಾದಗಿರಿ ಸಂಸದರಾದ ಜಿ ಕುಮಾರ ನಾಯಕ ಅವರು ಕೂಡ ಈಗಾಗಲೇ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಕೂಡ ಕೊಟ್ಟಿದ್ದಾರೆ, ಅದಕ್ಕಾಗಿ ಈ ಎಲ್ಲಾ ಮನವಿ ಪತ್ರಗಳಿಗೆ ದಯಮಾಡಿ ತಾವುಗಳು ಸ್ಪಂದಿಸಿ ನಮ್ಮ ದೋರನಹಳ್ಳಿ ಗ್ರಾಮಕ್ಕೆ ಒಂದು ಕನ್ಯಾ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೇಕಾಗಿ ಶಿಕ್ಷಣ ಸಚಿವರಿಗೆ ಕಾಂಗ್ರೆಸ್ ಯುವ ಮುಖಂಡ ನಿಜಗುಣ ದೊರನಹಳ್ಳಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅದ್ಯಕ್ಷಾದ ಸಾಯಿಬಣ್ಣ ಕೆಂಗುರಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರು ಮತ್ತು ಪ್ರದೇಶ ಕಾಂಗ್ರೆಸ್ ಪ ಪಂ ವಿಭಾಗದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಮೇಶ ದೊರಿ ಪ್ರದೇಶ ಕಾಂಗ್ರೆಸ್ ರಾಜ್ಯ ಹಿಂದುಳಿದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಭಂಡಾರಿ ನಾಟೇಕರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ವಿಭಾಗದ ಕಾರ್ಯದರ್ಶಿ ಯಾದ ತಾಯಪ್ಪ ಯಾದವ್ ಉಪಸ್ಥಿತರಿದ್ದರು.

 

ವರದಿ 👉

ಎಚ್ ಎಮ್ ಹವಾಲ್ದಾರ

ಅಹಿಂದ ಬಂದು ಪತ್ರಿಕೆ, ಯಾದಗಿರಿ

error: Content is protected !!