*ರೋಗಿಗಳ ತಪಾಸಣೆ ವೇಳೆ ದುರ್ನಡತೆ ಮತ್ತು ಗೂಂಡಾಗಿರಿ ತೋರಿದ ಮೈಸೂರು ಜಯದೇವ ಆಸ್ಪತ್ರೆ ವೈದ್ಯ ಡಾ||ದಿನೇಶ್ ಅಮಾನತ್ತು ಮಾಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ*
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ರೋಗಿಗಳ ತಪಾಸಣೆ ವೇಳೆ ಜಯದೇವ ಆಸ್ಪತ್ರೆಯ ಡಾ||ದಿನೇಶ್ ರವರು ದುರ್ನಡತೆ ಹಾಗೂ ಗೂಂಡಾಗಿರಿ ತೋರಿದರು ನೊಂದ ಶಿವಶಂಕರ್ ರವರು ಅಧ್ಯಕ್ಷರಾದ ದೇವರಾಜ್, ಶ್ರೀನಿವಾಸ್ , ಬೆನಕರಾಜ್ ರವರು ಮಾಧ್ಯಮಗೋಷ್ಟೀ ಏರ್ಪಡಿಸಿದ್ದರು.
ಈ ಮೇಲ್ಕಂಡ ವಿಷಯ ತಿಳಿಯಪಡಿಸುದೇನೆಂದರೇ ಶಿವಶಂಕರ್ ದಿನಕೂಲಿ ಕಾರ್ಮಿಕ ಅವರ ಮಗ ಮೈಸೂರಿನ ಜಿಟಿಟಿಎಫ್ ವ್ಯಾಸಂಗ ಮುಗಿಸಿರುತ್ತಾನೆ. ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಮಗನ ಟಿ.ಸಿ.ಪಡೆಯಲು ಮೈಸೂರಿಗೆ ತೆರಳುತ್ತಾರೆ.
ಶಿವಶಂಕರ್ ರವರು ಸ್ನೇಹಿತ ಜೊತೆಯಲ್ಲಿ ಕಾಲೇಜಿನ ಬಳಿ ತೆರಳುತ್ತಿದ್ದಾಗ ಇದ್ದಕ್ಕಿದಂತೆ ಶಿವಶಂಕರ್ ರವರ ಎದೆನೋವು ಕಾಣಿಸಿಕೊಂಡು ಸುಸ್ತಾಗಿ ನೆಲೆಕ್ಕೆ ಬಿದ್ದಿದ್ದಾರೆ. ಎದೆನೋವುನಿಂದ ಬಳಲುತ್ತಿದ್ದ ಶಿವಶಂಕರ್ ರವರನ್ನು ಹತ್ತಿರದಲ್ಲಿ ಇರುವ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಶಿವಶಂಕರ್ ರವರಿಗೆ ಜಯದೇವ ಆಸ್ಪತ್ರೆಯಲ್ಲಿ ಇಕೋ, ಇಸಿಜಿ ಸಂಪೂರ್ಣ ತಪಾಸಣೆ ನಡೆಸಲಾಯಿತು ನಂತರ ಆಗಿದ್ದೆ ಶೋಚನಿಯ ಸಂಗತಿ. ಸಂಪೂರ್ಣ ತಪಾಸಣೆ ನಂತರ ವೈದ್ಯರ ಬಳಿ ಸಂಪೂರ್ಣ ರಿಪೋರ್ಟ್ ತೊರಿಸಲು ವೈದ್ಯ ಡಾ||ದಿನೇಶ್ ರವರ ಬಳಿ ಹೋದರು.
ಉತ್ತಮ ಚಿಕಿತ್ಸೆ ಬೇಕು ಎಂದರೆ ಕುವೆಂಪುನಗರದಲ್ಲಿರುವ ನನ್ನ ಕಿನ್ಲಿಕ್ ಬನ್ನಿ ಎಂದು ಹೇಳುತ್ತಾರೆ ಡಾ||ದಿನೇಶ್ ರವರು.
ಸಾರ್ ನಾನು ದಲಿತ ಸಮುದಾಯಕ್ಕೆ ಸೇರಿದವನು, ದಿನಕೂಲಿ ನೌಕರ ಅಷ್ಟು ಖರ್ಚು ಮಾಡಲು ಆಗವುದಿಲ್ಲ ಎಂದು ಹೇಳಿದೆ, ಈ ವಿಷಯ ತಿಳಿದ ಕೊಡಲೆ ನನಗೆ ಕೆಟ್ಟ ಶಬ್ಬದಿಂದ ನಿಂದಿಸಿ ಅವರ ಸಿಬ್ಬಂದಿಗಳಿಗೆ ಹೇಳಿ ಕತ್ತು ಹಿಡಿದು ಅಚೆ ತಬ್ಬು ಇವನನ್ನ ಎಂದು ಹೇಳಿದರು , ನೋವಿನಿದ ದುಃಖಕರವಾಗಿ ಹೋರಗೆ ಬಂದಿರುತ್ತೇನೆ.
ರೋಗಿಗಳಿಗೆ ಪಾಲಿಗೆ ವೈದ್ಯರನ್ನು ದೇವರು ಎಂದು ಪೂಜಿಸುವ ನಾವು ಡಾ||ದಿನೇಶ್ ರವರ ಅಧಿಕಾರದ ದರ್ಪ ನೋಡಿದರೆ, ಕಡು ಬಡ ರೋಗಿಗಳಿಗೆ ಅನ್ಯಾಯವಾಗುತ್ತಿದೆ ಎನಿಸುತ್ತದೆ. ಈ ಘಟನೆ ಅದ ನಂತರದಲ್ಲಿ ಡಾ||ದಿನೇಶ್ ರವರು ತಪಾಸಣೆ, ನೋಡುವ ರೀತಿಯಲ್ಲಿ ಬದಲಾವಣೆ, ತಾತ್ಸರ ಮನೋಭಾವನೆಯಿಂದ ನೋಡಿದರು.ತುಂಬಾ ಸುಸ್ತಾಗುತ್ತಿದೆ ಎಂದು ವೈದ್ಯರಿಗೆ ಹೇಳಿದೆ ಸತ್ತರೆ, ಸಾಯಿ ನಿನ್ನಂಥವರು ಬಹಳ ಜನ ಸಾಯುತ್ತಾರೆ ಎಂದು ವೈದ್ಯ ದಿನೇಶ್ ಹೇಳುತ್ತಾರೆ.
ರೋಗಿಗಳಿಗೆ ಸರಿಯಾಗಿ ಸಮಯಕ್ಕೆ ಚಿಕಿತ್ಸೆ ದೊರಕಬೇಕು ಅದುವೇ ಗೋಲ್ಡನ್ ಮಿನಿಟ್ಸ್ ಅದು ಪ್ರಾಣ ಉಳಿಸುವ ಕ್ಷಣ ಮಾತ್ರವಾಗಿರುತ್ತದೆ, ಏನಾದರು ಆಗಬಹುದು ವೈದ್ಯ ಡಾ. ದಿನೇಶ್ ಇವೆಲ್ಲದರ ಕಡೆ ಗಮನವಿಲ್ಲ, ನೂರಾರು ರೋಗಿಗಳು ಪ್ರತಿದಿನ ಬರುತ್ತಾರೆ ಏನು ಮಾಡುವುದು ಎಂಬ ಉಡಾಫೆ ಉತ್ತರ ನೀಡುತ್ತಾರೆ.
ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಇವರು ಕುರಿತು ಹೇಳುವ ಮಾತುಗಳು ಡಾ||ದಿನೇಶ್ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ ಮತ್ತು ಮುಖ್ಯಮಂತ್ರಿಗಳು ಮತ್ತು ಅವರ ಪತ್ನಿರವರ ಕಡೆಯವರು ಏನು ಮಾಡಲು ಸಾಧ್ಯವಿಲ್ಲ ಹೇಳುತ್ತಿದ್ದಾರೆ.
ಇಂತಹ ದುರ್ನಡತೆ ತೋರಿದ ಮೈಸೂರಿನ ಜಯದೇವ ಆಸ್ಪತ್ರೆಯ ವೈದ್ಯ ಡಾ||ದಿನೇಶ್ ರವರು ಕೊಡಲೆ ಅಮಾನತ್ತು ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿ, ಕೊಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುವುದು ಮತ್ತು ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮಾಧ್ಯಮಗಳು ಇಂತಹ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಸಹಕಾರ ನೀಡಿ ಎಂದು ಕೋರಿಕೊಳ್ಳುತ್ತಿದ್ದೇನೆ.

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ