November 4, 2025

ಸುರಪುರ : ಗಾಂಧೀಜಿಯವರ ತತ್ವ ಸಿದ್ಧಾಂತ ಮೌಲ್ಯಗಳು ಇಂದಿನ ಪ್ರಜ್ಞಾವಂತರ ಯುವ ಜನತೆಗೆ ತುಂಬಾ ಅವಶ್ಯಕ – ಬಸವರಾಜ್ ಟನಕೇದಾರ್ ಕರೆ.*

*ಸುರಪುರ : ಗಾಂಧೀಜಿಯವರ ತತ್ವ ಸಿದ್ಧಾಂತ ಮೌಲ್ಯಗಳು ಇಂದಿನ ಪ್ರಜ್ಞಾವಂತರ ಯುವ ಜನತೆಗೆ ತುಂಬಾ ಅವಶ್ಯಕ – ಬಸವರಾಜ್ ಟನಕೇದಾರ್ ಕರೆ.

 

 

ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು

 

ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಹಾಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ಅನುಕರಣೀಯ ಮಾಡುವುದು ಬಹಳ ಮಖ್ಯವಾದ ಸ್ವಾತಂತ್ರ ಹೋರಾಟಗಾರರ ಅವರು ಮಾಡಿದ ಸತ್ಯಾಗ್ರಹಗಳ ಬಗ್ಗೆ ಕ್ರಾಂತಿ ಹೋರಾಟದ ಬಗ್ಗೆ ಇಂದಿನ ಯುವ ಪೀಳಿಗೆಯ ಯುವಕರಲ್ಲಿ ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇಂದಿನ ಯುವಕರಲ್ಲಿ ದೇಶದ ಪ್ರಗತಿಯ ಬಗ್ಗೆ ಒಗ್ಗಟ್ಟಿನ ಸೂತ್ರ ಇಂದಿನ ಯುವ ಜನತೆ ಮೈಗುಡಿ ಸಿಕೊಳ್ಳಬೇಕು ಇಂದಿನ ಯುವಕರು ದುಚ್ಛಟಗಳಿಂದ ದೂರು ಉಳಿಯಬೇಕು ಎಂದು ನಗರ ಸಭೆ ಕಾರ್ಯಾಲಯದಲ್ಲಿ ಪೂಜೆ ಸಲ್ಲಿಸಿ ನಗರ ಸಭೆ ಪೌರಾಯುಕ್ತರಾದ ಶ್ರೀ ಬಸವರಾಜ ಟಣಕೇದರ ತಿಳಿಸಿದರು.

 

ನಗರ ಸಭೆ ಕಚೇರಿ ಆವರಣದಲ್ಲಿ ನಗರಸಭೆ ಸದಸ್ಯರು ಹಾಗೂ ಎಲ್ಲಾ ಸಿಬ್ಬಂದಿಗಯರು ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂ‌ರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಿದರು ಇದೇ ವೇಳೆ ‌ ಮಾತನಾಡಿದ ನಗರಸಭೆ ವ್ಯವಸ್ಥಾಪಕರಾದ ಶ್ರೀ ಯಲ್ಲಪ್ಪ ನಾಯಕ್ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಿಕ. ಇಡೀ ಜಗತ್ತಿಗೆ ಶಾಂತಿ ತತ್ವವನ್ನು ಹೇಳಿಕೊಟ್ಟ ಮಹಾನ್ ಮಹಾತ್ಮ ರಾಗಿದ್ದರೂ ಇವರ ಈ ತತ್ವ ಸಿದ್ಧಾಂತ ಎಂದೆಂದಿಗೂ ಪ್ರಸ್ತುತದಲ್ಲಿದೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯ, ಸಂದೇಶಗಳನ್ನು ಎಲ್ಲರೂ ಪಾಲಿಸಿ ಸಂಸ್ಕೃತ,ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

 

ಇದೇ ಸಂದರ್ಭದಲ್ಲಿ ನಗರ ಸಭೆಯ ಎಲ್ಲಾ ಕಾರ್ಮಿಕ ಸಿಬ್ಬಂದಿ ವರ್ಗದವರಿಗೆ ಕಾರ್ಮಿಕರ ಕಿಟ್ ವಿತರಣೆ ಮಾಡಿದರು ಇದೇ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಾದ ಶಾಂತಪ್ಪ ಹೆಸರೂರ, ಸಮುದಾಯದ ಅಧಿಕಾರಿಗಳಾದ ದುರ್ಗಪ್ಪ ನಾಯಕ್ , ಹನುಮಂತ ಯಾದವ್ ಗುರುಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಶಕೀಲ್ ಅಹ್ಮದ್, ನಗರ ಸಭೆ ಸದಸ್ಯರಾದ ಶ್ರೀ ಜಂಬಣ್ಣ ಕೆಂಗೇರಿ , ಶ್ರೀ ನಾಸಿರ್ ಕುಂಡಾಲೆ , ಮುಖಂಡರಾದ ಸೋಮರಾಯ ಶೆಖಾಪುರ್ , ಪ್ರಕಾಶ್ , ಸಿದ್ದರಾಮ್ ಎಲಿಗರ್ ಹಾಗೂ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ವರದಿ 👉ಹುಲಗಪ್ಪ ಎಮ್ ಹವಾಲ್ದಾರ

error: Content is protected !!