November 4, 2025

ಕಲಕೇರಿ ವಲಯದ ಶ್ರೀ ಸದ್ಗುರು ಖಾದಿ ಮತ್ತು ಗ್ರಾಮೀಣ ಔದ್ಯೋಗಿಕ ಸಂಸ್ಥೆ ತಿಳಗೊಳ್ ಪ್ರೌಢ ಶಾಲೆಯಲ್ಲಿ ಪರಿಸರ ಮಾಹಿತಿ ಜಾಗೃತಿ ಕಾರ್ಯಕ್ರಮ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿಂದಗಿ ತಾಲೂಕ ವತಿಯಿಂದ ಪರಿಸರದ ಬಗ್ಗೆ ಜಾಗೃತಿ ಮಾಹಿತಿ ಕಾರ್ಯಕ್ರದಲ್ಲಿ ಸಸಿನಾಟಿ ಪರಿಸರದ ಬಗ್ಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಪ್ರಾಸ್ತಾವಿಕವಾಗಿ ಕೃಷಿ ಮೇಲ್ವಿಚಾರಕ ಸುರೇಶ್ .ಟಿ. ಮಾಹಿತಿ ನೀಡಿದರು.  ಶಾಲೆಯ ಕನ್ನಡ ಶಿಕ್ಷಣ ಬೋಧಿಸುತ್ತಿರುವ ಶ್ರೀ ಎಚ್‌ ಜಿ ಕನ್ನಿಮನಿ ಶಿಕ್ಷಕರು ಪರಿಸರದ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.  ಈ ಕಾರ್ಯಕ್ರಮದಲ್ಲಿ ಶ್ರೀ ಬಿಎಸ್ ಗುಡಿ ಶ್ರೀ ಆರ್ ಪಿ ಪಡೆಕನೂರ ಶ್ರೀ ಎ ಬಿ ನಾಯಕ್ ಶಿಕ್ಷಕರು ಹಾಗೂ ವಲಯ ಮೇಲ್ವಿಚಾರಕರಾದ ಸಿದ್ದಲಿಂಗಪ್ಪ ಪಾಟೀಲ್ ಸೇವಾಪ್ರತಿನಿಧಿಗಳಾದ ಶ್ರೀಮತಿ ಸ್ವಪ್ನ ಶ್ರೀ ಮತಿ ಸವಿತಾ ಮನಗೂಳಿ ಪ್ರೌಢಶಾಲೆಯ 150 ಕ್ಕೂ ಹೆಚ್ಚು ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು.ಮೖಬೂಬಬಾಷ ಮನಗೂಳಿ.

error: Content is protected !!