*ವಿಜಯಪುರ ಜಿಲ್ಲೆ*
ಬಸವನ ಬಾಗೇವಾಡಿ.
ಇಂದು ದಿನಾಂಕ.27.06.2025 ರಂದು ಮುಂಜಾನೆ 10.30. ಗಂಟೆಗೆ ಶ್ರೀ ಬಸವೇಶ್ವರ ಪ.ಪೂ .ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳ ಕಾರ್ಯಾಲಯದಲ್ಲಿ ಬಸವನ ಬಾಗೇವಾಡಿ ತಾಲೂಕಿನ 2025-26 ಸಾಲಿನ ಭಾರತಸೇವಾದಳದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಶಿಕ್ಷಕರಿಗಾಗಿ ಒಂದು ದಿನದ ಪುನರಚೇತನ ಕಾರ್ಯಗಾರವನ್ನು ಸೇವಾದಳದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು*.
ಭಾರತ ಸೇವಾದಳದ ತಾಲೂಕ ಅಧ್ಯಕ್ಷರಾದ ಎಸ್. ಆಯ ಗಚ್ಚಿನವರ ಅತಿಥಿಗಳಾದ ಶ್ರೀ ಶಿವನಗೌಡರು ಬಿರಾದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಸಂತ್ ರಾಥೋಡ್ ಅವರು ಹಿರಿಯರಾದ ಶ್ರೀ ಎಫ್ ಡಿ ಮೇಟಿ ಮರ್ತೂರ ವಕೀಲರು ಕಾರ್ಯಕರ್ತರು ಕೂಡಿಕೊಂಡು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರ್ ಜಿ ಅಳ್ಳಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಸೇವಾದಳದ ಕಾರ್ಯಕರ್ತರು ಜೂನ್ ತಿಂಗಳಿಂದ ಮಾರ್ಚ್ವರೆಗೆ ಕಾರ್ಯಕ್ರಮದ ಪಟ್ಟಿಯನ್ನು ವಿತರಿಸಿದರು.
ಸೇವಾದಳವು ಮಕ್ಕಳಲ್ಲಿ ಯುವಕರಲ್ಲಿ ಶಿಸ್ತು ದೇಶಭಕ್ತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಸಂತ ರಾಥೋಡ್ ಅವರು ವರ್ಷವಿಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನೋಡಿ ನಮಗೆ ಸಂತೋಷವಾಗಿದೆ ಎಂದು ಹೇಳಿದರು.
ಇದೇ ಸಮಯದಲ್ಲಿ ಅಶೋಕ ಗುಡದಿನ್ನಿ. ನಾಗಪ್ಪ ಕ್ವಾಟಿ ಶ್ರೀಮತಿ ಸಾವಿತ್ರಿ ಕಲ್ಯಾಣ ಶೆಟ್ಟಿ ಶ್ರೀ ಜಿ ಎೈ ನಾಗರಾಳ ಬಿ.ಎಸ್ .ಅವಟಿ ನಾಗೇಶ್ ಡೋಣೂರ ಅವರು ಏ . ಐ ಮಠಪತಿ ಅವರು ಶಿವಾನಂದ ಮಡಿಕೇಶ್ವರ ಬಿ.ವಿ. ಚಕ್ರಮನಿ ಕೊಟ್ರೇಶ ಹೆಗಡ್ಯಾಳ ಮತ್ತು ಬಸವನ ಬಾಗೇವಾಡಿ ತಾಲೂಕಿನ ಭಾರತ ಸೇವಾ ದಳದ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಮೖಬೂಬಬಾಷ ಮನಗೂಳಿ.

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ