November 4, 2025

ಕಳ್ಳ ಬಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ…

*ವಿಜಯಪುರ ಜಿಲ್ಲೆಯ*

ಕಳ್ಳ ಬಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅವರಿಂದ ದಿಡೀರ್ ದಾಳಿ ಆಗಿದೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ತಾಲೂಕಿನ ತಾಂಡಾಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಕಳ್ಳ ಬಟ್ಟಿ ಸಾರಾಯಿ ದಂಧೆ.

ಈ ಕಳ್ಳ ಬಟ್ಟಿ ಸಾರಾಯಿ ದಂಧೆಕೊರರಿಗೆ ಯಾರದು ಭಯ ಇಲ್ಲದಂತಾಗಿದೆ.

ಖದೀಮರು ರಾಜಾ ರೋಷವಾಗಿ ಕಳ್ಳ ಬಟ್ಟಿ ಸಾರಾಯಿ ದಂಧೆ ನಡೆಸುತ್ತಿದ್ದಾರೆ.

ಈ ದಿನ ಖಚಿತ ಮಾಹಿತಿ ಮೇರಿಗೆ ಅಬಕಾರಿ ಇಲಾಖೆ ಪೊಲೀಸರು ದಾಳಿ ಮಾಡಿದ್ದಾರೆ.

ಏಕ ಕಾಲಕ್ಕೆ ಎರಡು ಕಡೆಗೆ ದಿಡೀರನೇ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು.

ಖಚಿತ ಮಾಹಿತಿ ಮೇರಿಗೆ ಬಸವನ ಬಾಗೇವಾಡಿ ಅಬಕಾರಿ ಇನ್ಸ್ಪೆಕ್ಟರ್ ವಿಠ್ಠಲ್ ಜೀರಂಕಲಗಿ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಮುಳವಾಡ ಎಲ್ ಟಿ-2 ಯಲ್ಲಿ ಕಬ್ಬಿನ ಹೊಲದಲ್ಲಿ ಸುಮಾರು 17 ಬ್ಯಾರಲ್ ತುಂಬಿದ ಕಳ್ಳ ಬಟ್ಟಿ ಸಾರಾಯಿ ತಯಾರಿಸುತ್ತಿದ್ದ ಬೆಲ್ಲದ ರಸವನ್ನು ನಾಶಪಡಿಸಲಾಗಿದೆ ಮತ್ತು ಕುರುಬರದಿನ್ನಿ ತಾಂಡಾದಲ್ಲಿ ಸುಮಾರು 30-35 ಕೊಡಗಳಲ್ಲಿ ತುಂಬಿದ ಸಾರಾಯಿ ತಯಾರಿಸುತ್ತಿದ್ದ ಬೆಲ್ಲದ ರಸವನ್ನು ನಾಶ ಪಡಿಸಲಾಗಿದೆ.

ಜಿಲ್ಲಾ ವರದಿ ಮೖಬೂಬಾಷ ಮನಗೂಳಿ.

error: Content is protected !!