ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಸಿಮಾಂತರದಲ್ಲಿ ಭತ್ತದ ಗದ್ದೆಯಲ್ಲಿ ಕೊಯ್ಲು ಮೇಯುತಿದ್ದ 8 ಜಾನುವಾರುಗಳ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು ಜಾನುವಾರುಗಳು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ
ಅನೇಕ ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಹಳೆಯದಾಗಿದ್ದರಿಂದ ಈ ರೀತಿಯ ಅವಘಡ ಸಂಭವಿಸುತ್ತಿವೆ. ಜೆಸ್ಕಾಂ ಇಲಾಖೆ ವಿದ್ಯುತ್ ತಂತಿ ಬದಲಾಯಿಸದೆ ನಿರ್ಲಕ್ಷ ತೋರಿದ್ದರಿಂದ ಜಾನುವಾರುಗಳು ಸಾವನ್ನಪ್ಪಿದ್ದು ರೈತರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಸಾಲ ಮಾಡಿ ಜಾನುವಾರುಗಳ ಖರೀದಿಸಿದ ರೈತರಿಗೆ ಕಣ್ಣೀರು ಸುರಿಸುವಂತಾಗಿದ್ದು, ಜಾನುವಾರುಗಳ ಸಾವಿಗೆ ಜೆಸ್ಕಾಂ ಇಲಾಖೆ ಹಾಗೂ ಸರ್ಕಾರ ಪರಿಹಾರವನ್ನು ನೀಡಿ ರೈತರ ಕಣ್ಣೀರು ಒರೆಸಬೇಕಿದೆ..
ಸುದ್ದಿ ತಿಳಿದ ತಕ್ಷಣ ಊರಿನ ಪ್ರಮುಖರಾದ ವೆಂಕಟೇಶ್ ಬೇಟೆಗಾರ. ದೊಡ್ಡ ದೇಸಾಯಿ ದೇವರಗೋನಾಲ .ಘಟನಾ ಸ್ಥಳಕ್ಕೆ ಹೋಗಿ. ಜಾನುವಾರಗಳ ಮಾಲೀಕರಿಗೆ ಸಮಾಧಾನಪಡಿಸಿ .ನಂತರ ಜೆಸ್ಕಾಂ ಅಧಿಕಾರಿಗಳಿಗೆ. ಪೊಲೀಸ್ ಇಲಾಖೆಗೆ. ವೆಟರ್ನರಿ ಅಧಿಕಾರಿಗಳಿಗೆ. ಫೋನ್ ಮುಖಾಂತರ ಕರೆ ಮಾಡಿ . ತಕ್ಷಣ ಸ್ಥಳಕ್ಕೆ ಅವರನ್ನು ಕರೆಯಿಸಿ ಪರಿಶೀಲನೆ ಮಾಡಿ. ಸಂಬಂಧಪಟ್ಟ ಇಲಾಖೆ ತಕ್ಷಣ ಪರಿಹಾರ ಒದಗಿಸಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ .ನಾಗಪ್ಪ ಚಿಕ್ಕನಹಳ್ಳಿ .ಮಾರ್ಥಂಡಪ್ಪ ದೊರೆ .ಅಮಲಯ್ಯ ಬೇಟೆಗಾರ, ಮಲ್ಲಯ್ಯದಿವಲಗುಡ್ ನಾನೇಗೌಡ ಕಡಕಲ್. ವಿರುಪಾಕ್ಷಿ .ಬಸವರಾಜ್. ಬಲ ಭೀಮ .ಹನುಮಂತ. ಭೀಮಣ್ಣ ,ಮುಂತಾದವರು ಇದ್ದರು.
*ವರದಿ – ಹುಲಗಪ್ಪ ಎಂ ಹವಾಲ್ದಾರ್*

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…