ಯಾದಗಿರಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವ ಕಾರಣ ಇಂದು ನಗರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಮಹಾಸ್ವಾಧಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರವರ 603ನೇ ಜಯಂತಿಯನ್ನು ಸರಳವಾಗಿ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪನಮನ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಅವರು ಮಾತನಾಡಿ
14ನೇ ಶತಮಾನದಲ್ಲಿ ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ-ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಹೆಣ್ಣು ಮಗುವೇ ಹೇಮರೆಡ್ಡಿ ಮಲ್ಲಮ್ಮ. ಇವರು ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. “ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳುಸಾಕ ಬರುವಂಗ ಇರಬೇಕು” ಎನ್ನುವ ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆಂದು ಹೇಳಿದರು.
ಅವರು ಅತ್ತೆ ಆಕೆಗೆ ಉಣ್ಣುವುದಕ್ಕೆ, ಉಡುವುದಕ್ಕೆ ಸರಿಯಾಗಿ ಕೊಡದೆ, ಅವಳನ್ನು ಅಡವಿಗೆ ನೂಕಿ ಸಂಕಷ್ಟಗಳ ಸಂಕೋಲೆಗೆ ಸಿಗಿಸುವಳು. ಆದರೂ ನೊಂದುಕೊಳ್ಳದೆ ಕಾಡಿನಲ್ಲಿ ದನಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನಳಾಗಿರುತ್ತಿದ್ದಳು, ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನನೋವನ್ನೆಲ್ಲ ಮರೆತು ಅವರನ್ನು ಜೋಪಾನ ಮಾಡುತ್ತಿದ್ದರು. ಇವರು ಪಟ್ಟಂತಹ ಕಷ್ಟಗಳು ಅಷ್ಟಿಷ್ಟಲ್ಲಾ ಅವರ ದೈರ್ಯ ಸಾಹಸ ಧಾನ ಧರ್ಮದ ಗುಣವನ್ನು ನಾವೇಲ್ಲರೂ ಅಳವಡಿಸಿಕೊಳ್ಳುವಂತಹದು. ಇವರ ದೈವಭಕ್ತಿಯು ಶಿವನನ್ನೆ ಒಲಿಸಿಕೊಂಡು ಇನ್ನೊಬ್ಬರ ಜೀವನ ಯಾವತ್ತು ಕಷ್ಟಪಡಬಾರದೆಂದು ವರಪಡೆದ ರೀತಿಯನ್ನು ಕೇಳಿದರೆ ನಿಜವಾಗಿಯು ಹೆಮ್ಮೆಪಡುವಂತಿದೆAದು ನುಡಿದರು.
ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಸಾಹೇಬಗೌಡ ನಾಯಕ ಗೌಡಗೇರಾ, ವಿಶ್ವರಾಜ ಪಾಟೀಲ್, ಸಿದ್ದಪ್ಪ ಕೂಯಿಲುರು, ವಿಜಯಕುಮಾರ ರಾಠೋಡ, ಬಸವರಾಜ ಚಾಮ, ಜನಾರ್ಧನ ಬಡಿಗೇರಾ, ಮಹೇಶ ಠಾಣಗುಂದಿ, ಕಾಶಿನಾಥ ನಾನೇಕ, ಸಿದ್ದಯ್ಯ ಸ್ವಾಮಿ ಹಿರೇಮಠ, ಮಲ್ಲೇಶ ನಾಯಕ, ಮರೆಪ್ಪ ಕಡ್ಡಿ, ಹಣಮಂತ ದೊರೆ, ನಾಗರಾಜ ಪಿಲ್ಲಿ, ರಮೇಶ.ಡಿ.ನಾಯಕ ಹಾಗೂ ಇನ್ನೂ ಅನೇಕ ಕರವೇ ಕಾರ್ಯಕರ್ತರರು ಭಾಗಿಯಾಗಿದ್ದರು.
*ವರದಿ – ಹುಲಗಪ್ಪ ಎಂ ಹವಾಲ್ದಾರ್*

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…