November 4, 2025

 “ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ನೆಲೆಯೂರಿರುವ ಅಕ್ರಮ ಬಾಂಗ್ಲಾ ನುಸುಳುಕೋರರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಅವರನ್ನು ಅವರ ಮಾತೃ ದೇಶಕ್ಕೆ ವಾಪಸ್ಸು ಕಳುಹಿಸಬೇಕೆಂದು ಆಗ್ರಹ”

ಮಾಧ್ಯಮದ ಆತ್ಮೀಯರೇ,

“ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ನೆಲೆಯೂರಿರುವ ಅಕ್ರಮ ಬಾಂಗ್ಲಾ ನುಸುಳುಕೋರರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಅವರನ್ನು ಅವರ ಮಾತೃ ದೇಶಕ್ಕೆ ವಾಪಸ್ಸು ಕಳುಹಿಸಬೇಕೆಂದು ಆಗ್ರಹ”

ಬೆಂಗಳೂರು ಮಹಾನಗರದ ಮಹದೇವಪುರ, ಕೆ. ಆರ್. ಪುರಂ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವಂತಹ ಮಾರತ್ತಹಳ್ಳಿ ಜಂಕ್ಷನ್, ಕೆ. ಆರ್. ಪುರಂ ಕೆರೆ, ಜಕ್ಕಸಂದ್ರ ಜಂಕ್ಷನ್, ಕುಂದಲಹಳ್ಳಿ ಗೇಟ್, ಮುನ್ನೇಕೊಳಲು, ಕಾಡುಬೀಸನಹಳ್ಳಿ, ದೇವರ ಬೀಸನಹಳ್ಳಿ, ಹುಳಿಮಾವು ಮತ್ತು ಚಿಕ್ಕ ಬೇಗೂರು ಪ್ರದೇಶಗಳಲ್ಲಿ ಕಳೆದ 13 ವರ್ಷಗಳಿಂದಲೂ ಸುಮಾರು 50,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರು ನಕಲಿ ದಾಖಲೆಗಳನ್ನು ಬಳಸಿ ವಾಸ ಮಾಡುತ್ತಿರುವ ಬಗ್ಗೆ 2013-14 ಮತ್ತು 2015-2016 ರಲ್ಲಿ ಅಂದಿನ ಗೃಹ ಸಚಿವರು ಮತ್ತು ಪೋಲೀಸ್ ಮಹಾ ನಿರ್ದೇಶಕರಿಗೆ ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಲಾಗಿತ್ತು.

ಸುಧೀರ್ ಶೆಟ್ಟಿ ಎಂಬ ಮಾಧ್ಯಮದ ಸ್ನೇಹಿತರ ಸಹಕಾರದಿಂದ ಚುಟುಕು ಕಾರ್ಯಾಚರಣೆ (Sting Operation) ಯನ್ನು ಮಾಡುವ ಮೂಲಕ ಮೇಲೆ ತಿಳಿಸಿರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಅಕ್ರಮ ಬಾಂಗ್ಲಾ ನುಸುಳುಕೋರರ ಸಂದರ್ಶನಗಳನ್ನು ಮಾಡಿದ್ದು, ಆ ಸಂದರ್ಶನಗಳಲ್ಲಿ ಮೇಲೆ ತಿಳಿಸಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಾಂಗ್ಲಾ ನುಸುಳುಕೋರರು “ತಾವು ಬಾಂಗ್ಲಾ ದೇಶದಿಂದ ಭಾರತದ ಗಡಿಯೊಳಗೆ ಬಂದಿದ್ದು ಹೇಗೆ ಮತ್ತು ಅಲ್ಲಿಂದ ಬೆಂಗಳೂರು ಮಹಾನಗರ ತಲುಪಿದ್ದ ರೀತಿ ಹೇಗೆ ಹಾಗೂ ಬೆಂಗಳೂರು ಮಹಾನಗರದಲ್ಲಿ ಅವರಿಗೆ ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಟ್ಟವರು ಯಾರು”ಎಂಬ ವಿಷಯಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದರು.

ಮೇಲೆ ತಿಳಿಸಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅವರುಗಳು ಸಂಜೆ ಹೊತ್ತು ಚಿಂದಿ ಹಾಯುವ ಕೆಲಸವನ್ನು ಮತ್ತು ಬೆಂಗಳೂರಿನ ಪೂರ್ವ ಭಾಗದ ಪ್ರದೇಶಗಳಲ್ಲಿ ಇರುವ ಮಾಲ್ಸ್ / ಮಲ್ಟಿಪ್ಲೆಕ್ಸ್ ಗಳು ಮತ್ತು ಬೃಹತ್ ವಸತಿ ಸಂಕೀರ್ಣಗಳಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಸಹ ಅವರಿಂದಲೇ ತಿಳಿದುಕೊಳ್ಳಲಾಗಿತ್ತು.

ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲದೇ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಬಹುತೇಕ ಕಾಫಿ ಎಸ್ಟೇಟ್ ಗಳಲ್ಲಿ ದೇಶದ್ರೋಹಿ ಮಧ್ಯವರ್ತಿಗಳು ಕೇವಲ ಕಮಿಷನ್ ಹಣದ ಆಸೆಗಾಗಿ ಇದೇ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಕಾರ್ಮಿಕರನ್ನಾಗಿ ನಿಯೋಜಿಸಿರುವುದೂ ಸಹ ಅತ್ಯಂತ ಸ್ಪಷ್ಟವಾಗಿರುತ್ತದೆ !!!

ಸ್ಥಳೀಯ ಕಾರ್ಮಿಕರಾದರೆ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ದರಪಟ್ಟಿಯಂತೆ ಅಂದರೆ – ಪ್ರತೀ ವ್ಯಕ್ತಿಗೆ ಕನಿಷ್ಠ ₹ 17,500 ರೂ.ಗಳಂತೆ ಮಾಸಿಕ ವೇತನ ನೀಡಬೇಕಿದ್ದು, ಅಕ್ರಮ ಬಾಂಗ್ಲಾ ನುಸುಳುಕೋರರಾದರೆ ಕೇವಲ ₹ 8,000 ದಿಂದ ₹ 10,000 ರೂಪಾಯಿಗಳ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುತ್ತಾರಾದ್ದರಿಂದ, ಹಣವನ್ನು ಉಳಿಸುವ ಏಕೈಕ ದುರುದ್ದೇಶದಿಂದ ಹಲವಾರು ದೇಶ ದ್ರೋಹಿ ಉದ್ಯಮಿಗಳು, ಕಟ್ಟಡ ನಿರ್ಮಾಣಗಾರರು, ಮಾಲ್ಸ್ / ಮಲ್ಟಿಪ್ಲೆಕ್ಸ್ ಗಳ ಮಾಲೀಕರು ಮತ್ತು ಕಾಫಿ ಎಸ್ಟೇಟ್ ಗಳ ಮಾಲೀಕರುಗಳು ಕಡಿಮೆ ಹಣಕ್ಕೆ ಕೆಲಸ ಮಾಡಲು ಸಿದ್ಧರಿರುವ ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ತಮ್ಮ ತಮ್ಮ ವಾಣಿಜ್ಯ ಕಟ್ಟಡಗಳಲ್ಲಿ, ವಸತಿ ಸಂಕೀರ್ಣಗಳಲ್ಲಿ ಮತ್ತು ಕಾಫಿ ಎಸ್ಟೇಟ್ ಗಳಲ್ಲಿ ಕಾರ್ಮಿಕರ ಕೆಲಸಗಳನ್ನು ನೀಡುವ ಮೂಲಕ ದೊಡ್ಡ ಪ್ರಮಾಣದ ದೇಶ ದ್ರೋಹದ ಕಾರ್ಯಗಳನ್ನು ಮಾಡುತ್ತಿದ್ದಾರೆ !!!

ಭಾರತೀಯ ನಾಗರಿಕರಿಗೆ ಮಾತ್ರ ಸಿಗಬೇಕಿರುವ ಮೂಲಭೂತ ಸೌಕರ್ಯಗಳಾದ ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಸೌಲಭ್ಯಗಳನ್ನು ಕೆಲವು ಮಂದಿ ದೇಶದ್ರೋಹಿಗಳು ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ದೊರಕಿಸಿಕೊಡುವ ಮೂಲಕ ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಘನಘೋರ ಅಪರಾಧ ಎಸಗಿರುತ್ತಾರೆ.

ಬೆಂಗಳೂರು ನಗರದ ಕೆ. ಆರ್. ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬಾಂಗ್ಲಾ ನುಸುಳುಕೋರರು ವಾಸಿಸುತ್ತಿದ್ದು, ಮುಂದೆ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಾಂಗ್ಲಾ ನುಸುಳುಕೋರರಲ್ಲೇ ಯಾರಾದರೊಬ್ಬರು ಅಥವಾ ಇಬ್ಬರು ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿ ಬಂದರೂ ಸಹ ಆಶ್ಚರ್ಯವಿಲ್ಲ !!!

ಅಲ್ಲದೇ, ಭಾರತದ ಸಂಸತ್ತನ್ನು ಪ್ರವೇಶಿಸುವ ಲೋಕಸಭಾ ಸದಸ್ಯರನ್ನು, ಕರ್ನಾಟಕ ರಾಜ್ಯದ ವಿಧಾನಸಭೆಯನ್ನು ಪ್ರವೇಶಿಸುವ ವಿಧಾನಸಭಾ ಸದಸ್ಯರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪ್ರವೇಶಿಸುವ ಪಾಲಿಕೆ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಇಂತಹ ಅಕ್ರಮ ಬಾಂಗ್ಲಾ ನುಸುಳುಕೋರರೂ ಸಹ ಪ್ರಮುಖ ಪಾತ್ರ ವಹಿಸುವ ಸನ್ನಿವೇಶಗಳನ್ನು ಕೆಲವೊಂದು ಸ್ವಾರ್ಥ ರಾಜಕಾರಣಿಗಳು ಮತ್ತು ಕೆಲವು ದೇಶದ್ರೋಹಿಗಳು ತಮ್ಮ ತಮ್ಮ ರಾಜಕೀಯ ಸ್ವಾರ್ಥಗಳಿಗಾಗಿ ಮಾಡಿರುತ್ತಾರೆ.

ಮಹದೇವಪುರ, ಕೆ. ಆರ್. ಪುರಂ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಕಂದಾಯ ಅಧಿಕಾರಿಗಳು (RO), ಸಹಾಯಕ ಕಂದಾಯ ಅಧಿಕಾರಿಗಳು (ARO), ಕಂದಾಯ ಪರಿವೀಕ್ಷಕರು (RI) ಮತ್ತು ಕಂದಾಯ ವಸೂಲಿಗಾರರು (TI) ಗಳು ಶಾಮೀಲಾಗಿ ಹಣಕ್ಕೋಸ್ಕರ ದಾಖಲೆಗಳನ್ನು ಪರಿಶೀಲಿಸದೆಯೇ ಮತದಾರರ ಗುರುತಿನ ಚೀಟಿಗಳನ್ನು ಮಾಡಿ ಕೊಡುವ ಮೂಲಕ ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಭಾರತ ದೇಶದ ಪೌರತ್ವವನ್ನು ಕಾನೂನು ಬಾಹಿರವಾಗಿ ದೊರಕಿಸಿಕೊಡುವ ರಾಷ್ಟ್ರದ್ರೋಹದ ಅಕ್ಷಮ್ಯ ಅಪರಾಧವನ್ನು ಎಸಗಿರುತ್ತಾರೆ.

ಹಾಗೆಯೇ, “ಆಧಾರ್ ಕಾರ್ಡ್”ಗಳನ್ನು ಮಾಡಿಕೊಡುವ ಕೆಲವು ಖಾಸಗಿ ಏಜೆನ್ಸಿಗಳೂ ಸಹ ಹಣದ ಆಸೆಗಾಗಿ ಇಂತಹ ಅಕ್ರಮ ನುಸುಳುಕೋರರಿಗೆ “ಆಧಾರ್ ಕಾರ್ಡ್”ಗಳನ್ನು ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳ ಆಯ್ಕೆ ಮಾಡುವ ಹಕ್ಕನ್ನು ಕೇವಲ ಭಾರತೀಯ ನಾಗರಿಕರು ಮಾತ್ರ ಹೊಂದಿರುತ್ತಾರೆಯೇ ಹೊರತು ಇಂತಹ ಅಕ್ರಮ ನುಸುಳುಕೋರರಲ್ಲ ಎಂಬುದು ತಮಗೂ ಸಹ ತಿಳಿದಿರುವ ವಿಷಯ.

ಆದುದರಿಂದ, ಈ ಪತ್ರದೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು, ವಿಡಿಯೋಗಳನ್ನು ಕೂಲಂಕುಶವಾಗಿ ಪರಿಶೀಲಿಸಿ – ಮಾರತ್ತಹಳ್ಳಿ ಜಂಕ್ಷನ್, ಕೆ. ಆರ್. ಪುರಂ ಕೆರೆ, ಜಕ್ಕಸಂದ್ರ ಜಂಕ್ಷನ್, ಕುಂದಲಹಳ್ಳಿ ಗೇಟ್, ಮನ್ನೇಕೊಳಲು, ಕಾಡುಬೀಸನಹಳ್ಳಿ, ದೇವರಬೀಸನ ಹಳ್ಳಿ, ಹುಳಿಮಾವು ಮತ್ತು ಚಿಕ್ಕ ಬೇಗೂರು ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭಾರತೀಯ ಪೌರರಂತೆ ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಪಡೆದು ವಾಸಿಸುತ್ತಿರುವ ಬಾಂಗ್ಲಾ ನುಸುಳುಕೋರರ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಂಡು, ಅವರುಗಳನ್ನು ಅವರ ಮಾತೃ ದೇಶಕ್ಕೆ ವಾಪಸ್ಸು ಕಳುಹಿಸುವ ಸಂಬಂಧ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಆ ಮುಖೇನ ಮುಂದಿನ ಪೀಳಿಗೆಯು ಆತಂಕಕಾರಿ ಜೀವನವನ್ನು ನಡೆಸುವ ಸನ್ನಿವೇಶಗಳು ಸೃಷ್ಟಿಯಾಗದಂತೆ ಹೊಣೆಗಾರಿಕೆ ಪ್ರದರ್ಶಿಸಬೇಕೆಂದು ಅಕ್ರಮ ಬಾಂಗ್ಲಾ ನುಸುಳುಕೋರರೇ ಸ್ವತಃ ಮಾತನಾಡಿರುವ ವಿಡಿಯೋ ದಾಖಲೆಗಳ ಸಹಿತ ರಾಜ್ಯದ ಗೃಹ ಸಚಿವರನ್ನು ಹಾಗೂ ಪೋಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಲಾಗಿದೆ.

ಹಾಗೆಯೇ ಈ ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಕಾನೂನು ಬಾಹಿರವಾಗಿ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಮಾಡಿಕೊಟ್ಟಿರುವ ದೇಶದ್ರೋಹಿಗಳ ವಿರುದ್ಧವೂ ಸಹ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.

 

– ರಮೇಶ್ ಎನ್. ಆರ್.

ಮಾಜಿ ಅಧ್ಯಕ್ಷರು

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ

ಹಾಗೂ

ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

error: Content is protected !!