November 4, 2025

ಮಾಳನೂರ ಗ್ರಾಮದ ರೈತನ ಮೇಲೆ ಕೆಎಸ್ಆರ್ ಟಿಸಿ ಬಸ್ ಚಾಲಕರ ದೌರ್ಜನ್ಯ ಖಂಡಿಸಿ ಯಾದಗಿರಿ ಪೊಲೀಸ್ ಅಧಿಕಾರಿಗಳಿಗೆ ಮನವಿ

 

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮಾಳನೂರು ಗ್ರಾಮದ ನಿವಾಸಿಯಾದ ಮದನಪ್ಪ ತಂದೆ ಬಸಪ್ಪ ದೊಡ್ಡಮನಿ ಅನ್ನುವ ರೈತ ತಾಳೆಕೋಟೆ ಹುಣಸಿ ರಸ್ತೆ ಮುಖಾಂತರ ಹೊಲಕ್ಕೆ ಹೋಗಿ ಮನೆಗೆ ಹೋಗುವ ಸಮಯದಲ್ಲಿ ತಾಳಿಕೋಟೆಯಿಂದ ಶಹಾಪೂರ ಹೋಗುವ ಬಸ್ ಕೆ ಎಸ್ ಆರ್ ಟಿ ಸಿ ಬಸ್ಸಿನ ಚಾಲಕ ಹಿಂದೆಯಿಂದ ಬಂದು ಅಡ್ಡ ದಿಡ್ಡಿ ಗಾಡಿ ಓಡಿಸುವುದನ್ನು ನೋಡಿ ಭಯಪಟ್ಟು ಬಸ್ ನಿಲ್ಲಿಸಿ ಸರಿಯಾಗಿ ಗಾಡಿ ಓಡಿಸುವುದಕ್ಕೆ ಬರುವುದಿಲ್ಲವೇ ನಿಮಗೆ ಈ ರೀತಿ ಗಾಡಿ ಓಡಿಸಿದರೆ ಸಾರ್ವಜನಿಕರು ಓಡಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಮದನಪ್ಪನಿಗೆ ಮನ ಬಂದಂತೆ ಅಲ್ಲೇ ಮಾಡಿ ಬಾಯಲ್ಲಿನ ಹಲ್ಲು ಮುರಿಯುವಂತೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ

ಈ ಘಟನೆಗೆ ಸಂಬಂಧಿಸಿದಂತೆ ದಿನಾಂಕ 26 2 2025 ರಂದು ಹುಣಸಗಿ ತಾಲೂಕು ಸಬ್ ಇನ್ಸ್ಪೆಕ್ಟರ್ ಅವರು ದೂರ ದಾಖಲು ಮಾಡಿಕೊಳ್ಳದೆ ಸರಕಾರಿ ನೌಕರರ ದೂರನ್ನು ಪಡೆದುಕೊಂಡು ನನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದರು

ಮತ್ತು ಆ ಇಬ್ಬರು ಸರಕಾರಿ ಚಾಲಕ ಮತ್ತು ನಿರ್ವಾಹಕ ಮಾಳನೂರು ಗ್ರಾಮದ ಸಂಬಂಧಿಕರು ಆದ್ದರಿಂದ ನಾನು ದೂರು ಕೊಡಲು ಹೋದಾಗ ಪೊಲೀಸರು ದೂರು ತೆಗೆದುಕೊಂಡಿಲ್ಲ ಎಂದು ಉಲ್ಲೇಖ ಮಾಡಲಾಗಿದೆ

ನಾನು ಪ್ರಾಥಮಿಕ ಆರೋಗ್ಯ ಕೇಂದ್ರ ಹುಣಸಿಗಿಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಬಿಜಾಪುರಕ್ಕೆ ತೆರಳಿ, ಅಲ್ಲಿಂದ 12 ದಿನ ಕಳೆದು ಊರಿಗೆ ಬಂದಮೇಲೆ ಮತ್ತೆ ನನ್ನ ಮೇಲೆ ಅಲ್ಲೇ ಮಾಡಿದ್ದಾರೆ ಆದಕಾರಣ ಇವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಇವರ ಮೇಲೆ ಕಾನೂನು ಕ್ರಮ ಜರಗಿಸಿ ಎಂದು ನಾನು ಹುಣಸಿಗಿ ಪೊಲೀಸ್ ಠಾಣೆಗೆ ಹೋದರೆ ನೀನೇ ಕುಡಿದು ಗಲಾಟೆ ಮಾಡಿದ್ದಿಯಾ ಎಂದು ನನಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ

ಆದ್ದರಿಂದ ಈ ಇಬ್ಬರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ದಿನಾಂಕ 19.05.2025 ರಿಂದ ತಮ್ಮ ಕಛೇರಿ ಎದುರಲ್ಲಿ ದಲಿತ ಸಂಘಟನೆಗಳ ಬೆಂಬಲ ಪಡೆದುಕೊಂಡು ನನಗೆ ನ್ಯಾಯ ಸಿಗುವವರೆಗೂ ನನ್ನ ಹೆಂಡತಿ ಜೊತೆಗೂಡಿ ಅಮರಣಾಂತ ಉಪವಾಸ ಸತ್ಯಾಗ್ರ ಮಾಡುತ್ತಿರುವ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗಿರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ

ಬಡವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಯಾವ ರೀತಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಸಾರ್ವಜನಿಕರು ಕಾದು ನೋಡಬೇಕಿದೆ

ವರದಿ ಹುಲಗಪ್ಪ ಎಮ್ ಹವಾಲ್ದಾರ

error: Content is protected !!