November 4, 2025

ಕಕ್ಕಸಗೇರಾ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ವೇತನ ನೀಡದ ಅಭಿವೃದ್ಧಿ ಅಧಿಕಾರಿಗಳು.

ಶಹಪುರ: ತಾಲೂಕಿನ ಕಕ್ಕಸಗೇರಾ ಗ್ರಾಮ ಪಂಚಾಯಿತಿಯಲ್ಲಿ ಕೆಲವು ದಿನಗಳ ಹಿಂದೆ ಅಲ್ಲಿನ ನರೇಗಾ ಕೂಲಿ ಕಾರ್ಮಿಕರ ಸೇರಿಕೊಂಡು 6,9,8 ಪಾರಂ ಭರ್ತಿ ಮಾಡಿ, ಕಾನೂನಿನ ಚೌಕಟ್ಟಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದರ ಮುಖಾಂತರ ಕೆಲಸಕ್ಕೆಟ್ಟಿಸಿಕೊಂಡಿದ್ದರು. ಆದರೆ ಈಗ ಪಂಚಾಯತ್ ಅಧಿಕಾರಿಗಳು ಮತ್ತು ಕೆಲವು ಗ್ರಾಮ ಪಂಚಾಯತ್ ಸದಸ್ಯರು ಸೇರಿಕೊಂಡು ದಿನಗೂಲಿ ಕಾರ್ಮಿಕರ ಕೆಲಸದ ಜಿಪಿಎಸ್ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುತ್ತಿಲ್ಲ. ಹಾಗೆ ಜಿಪಿಎಸ್ ಮಾಡುವ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಕೈಗೆ ಫೋನು ನೀಡಿ ಜಿಪಿಎಸ್ ಮಾಡು ಎಂದು ಹೇಳುವ ಮುಖಾಂತರ, ದಿನನಿತ್ಯ ದುಡಿತ್ತಿರುವ ನರೇಗಾ ಕೂಲಿ ಕಾರ್ಮಿಕರಿಗೆ ಇವರೆಲ್ಲ ಮಾಡುತ್ತಿರುವ ಕಾರ್ಯಗಳಿಂದ ಅವರಿಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಇಂದು ಗ್ರಾಮ ಪಂಚಾಯತಿಯ ಮುಂದೆ ಕಾರ್ಮಿಕರು ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

*ವರದಿ – ಹುಲಗಪ್ಪ ಎಂ ಹವಾಲ್ದಾರ್*

error: Content is protected !!