*ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಆಚರಿಸಲಾಯಿತು*.
ಇಂದು ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತ್ಯೋತ್ಸವದ ಅಂಗವಾಗಿ ಮಹರ್ಷಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುರ್ಷ್ಪಾಚನೆ ಮಾಡಿ ಗೌರವ ನಮನ ಸಲ್ಲಿಸಿ ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಅವರು.
ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತ್ಯೋತ್ಸವನ್ನು ಕರ್ನಾಟಕ ರಾಜ್ಯಾದ್ಯಂತ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿ ಪರಮಾತ್ಮನನ್ನು ಕುರಿತು ಬಹಳ ವರ್ಷಗಳಕಾಲ ತಪಸ್ಸು ಮಾಡುತ್ತಿದ್ದಾಗ ಮಹರ್ಷಿ ವಾಲ್ಮೀಕಿಯವರ ಸುತ್ತ ಕಟ್ಟಿರುವ ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿಯೆಂದು ಹೆಸರು ಬಂತು. ವಾಲ್ಮೀಕಿಯವರು ಕೇವಲ ತಪಸ್ವಿಯಾಗಿರಲಿಲ್ಲ, ಕುಲಪತಿಯಾಗಿ ಒಂದು ಕೇಂದ್ರದ ಮಾರ್ಗದರ್ಶಕ ಪ್ರಭು ಎನಿಸಿದ್ದರು.
ಆಧ್ಯಾತ್ಮ ವಿದ್ಯೆ ಅದರ ಅಂಗಗಳಾದ ವೇದೋಪನಿಷತ್ತುಗಳು ಶಿಲ್ಪಿ, ಗಾಂಧರ್ವ, ಚಿತ್ರಕಲೆ, ನಾಟ್ಯ ಮೊದಲಾದ ನಾನಾ ಇತರ ವಿದ್ಯೆಗಳ ಬೋಧನೆಯು ಅವರಿಂದ ಪಡೆಯಬಹುದಿತ್ತು. ಚರಿತ್ರೆಯಲ್ಲಿ ಆದಿಕವಿ ಮಹರ್ಷಿ ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ವಾಲ್ಮೀಕಿಯವರು ಒಂದು ರೀತಿಯಲ್ಲಿ ಚಿಂತಕ ಚರಿತ್ರೆಕಾರ ಸಮಾಜ ಸುಧಾರಕ ಶಿಕ್ಷಣ ತಜ್ಞ ತತ್ವಜ್ಞಾನಿ ಶೋಷಿತರ ನೇತಾರಕೂಡ ಹೌದು,
ಇಂತಹ ಮಹಾನ್ ಪುರುಷರು ಜನಿಸಿದ ಪೂಣ್ಯ ಭೂಮಿ ನಮ್ಮದು. ಇಲ್ಲಿ ಜನಿಸಿದ ನಾವೇ ಧನ್ಯರು ಎಂದು ನುಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಸಂತೋಷ ಕುಮಾರ ನಿರ್ಮಲಕರ್, ಅಂಬ್ರೇಶ ಹತ್ತಿಮನಿ, ರವಿ ನಾಯಕ, ಮಂಜು ರಾಂಪೂರಹಳ್ಳಿ, ಭೀಮರಾಯ ರಾಮಸಮುದ್ರ, ಬಸವರಾಜ ಕಡ್ಡಿ, ಹಣಮಂತ ನಾಯಕ, ಅಶೋಕ ನಾಯಕ, ಶರಣಗೌಡ ರಾಮಸಮುದ್ರ, ಮಲ್ಲು ಜಯಸಿಂಹ, ಅಂಜು ನಾಯಕ, ಬಸ್ಸು ಹತ್ತಿಕುಣಿ, ಮಂಜು ನಾಲವಾರ ಹಾಗೂ ಇತರೇ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ 👉🏻
ಎಚ್ ಎಮ್ ಹವಾಲ್ದಾರ.
ಅಹಿಂದ ಬಂದು ಪತ್ರಿಕೆ, ಯಾದಗಿರಿ

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ