*ಶ್ರೀ ಮಹದೇವಪ್ಪ ಪ್ರತಿಷ್ಠಾನ: ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ*
*ಮಕ್ಕಳು ಕೆಟ್ಟ ಚಟಗಳಿಂದ ದೂರವಿರಿ, ಪ್ರೀತಿ ವ್ಯಾಮೋಹಕ್ಕೆ ಬಲಿಯಾಗಬೇಡಿ-ಡಾ||ನಾಗಲಕ್ಷ್ಮಿಚೌಧರಿ*
ಕಮಲನಗರ: ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ನಲ್ಲಿ ಶ್ರೀ ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಎಸ್.ಎಸ್.ಎಲ್.ಸಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ಡಾ||ನಾಗಲಕ್ಷ್ಮಿ ಚೌಧರಿರವರು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ಕಲಾ ದರ್ಪಣ ಆಟ್ಸ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಹೇಮಾ ವಿನಾಯಕ್ ಪಾಟೀಲ್ ರವರು ದೀಪ ಬೆಳಗಿಸಿ ಉಚಿತ್ ನೋಟ್ ಪುಸ್ತಕ ವಿತರಣಾ, ಎಸ್.ಎಸ್.ಎಲ್.ಸಿ.ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಿಳಾ ಅಯೋಗದ ಅಧ್ಯಕ್ಷೆ ಡಾ||ನಾಗಲಕ್ಷ್ಮಿಚೌಧರಿರವರು ಮಾತನಾಡಿ ಕನ್ನಡದ ಮಕ್ಕಳು ಶಿಕ್ಷಣ ಜೊತೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು.ಜನರಿಂದ ಜನರಿಗೆ ಹಾಡಿನ ಮೂಲಕ ಹೇಳುವ ಪದಗಳಿಗೆ ಜಾನಪದ ಎಂದು ಹೇಳುತ್ತಾರೆ, ನಮ್ಮ ಕಲೆ, ಸಾಹಿತ್ಯ ಉಳಿಯಬೇಕು, ಬೆಳಯಬೇಕು.
ಶಿಕ್ಷಕರು ಮಕ್ಕಳ ಮನಸ್ಸನ್ನು ಅರಿಯಬೇಕು ಅಗ ಮಾತ್ರ ಶಿಕ್ಷಣದಲ್ಲಿ ಬದಲಾವಣೆ ತರಲು ಸಾಧ್ಯ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕುತ್ತಿರಲ್ಲಿಲ, ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುತ್ತಿದ್ದರು ಇದರಿಂದ ಶಿಕ್ಷಣದಿಂದ ಬಾಲಕಿಯರು ವಂಚಿತರಾಗುತ್ತಿದ್ದರು.
ಆದರೆ ಕಾಲ ಬದಲಾಗಿದೆ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ, ಸ್ವಾಭಿಮಾನಿಗೆ ಬದುಕು ಸಾಗುತ್ತಿದ್ದಾರೆ.ಮಕ್ಕಳು ನಿಮ್ಮ ಕಾಲ ಮೇಲೆ ನಿಲ್ಲ ಬೇಕಾದರೆ ಮಕ್ಕಳು ಕೆಟ್ಟ ಚಟಗಳಿಂದ ದೂರವಿರಬೇಕು ಮತ್ತು ಪ್ರೀತಿ ವ್ಯಾಮೋಹಕ್ಕೆ ಬಲಿಯಾಗಬಾರದು.
ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ನಂತರ ರಾಜ್ಯದ ಮುಖ್ಯಮಂತ್ರಿಯಾದರು ಸಿದ್ದರಾಮಯ್ಯರವರು ಸರ್ಕಾರಿ ಶಾಲೆ ಮಕ್ಕಳು ನೀವು ಏನಾ ಬೇಕಾದರು ಆಗಬಹುದು ನೀವು ಇಷ್ಟದಂತೆ ಸಾಧನೆ ಮಾಡುವ ಛಲವಿದೆ ನಿಮ್ಮಲ್ಲಿ.
ಮಕ್ಕಳಿಗೆ ಯಾವುದಾದರು ತೊಂದರೆಯಾದರೆ ಸಹಾಯವಾಣಿಗೆ ಕರೆ ಮಾಡಿ ಮತ್ತು ಮಕ್ಕಳ ಸುರಕ್ಷತೆ ಕುರಿತು ಪೊಲೀಸ್ ಇಲಾಖೆಯವರು ಮಕ್ಕಳಿಗೆ ಅರಿವು ಮೂಡಿಸಬೇಕು.
ಬಡವರ ಮಕ್ಕಳು ಬೆಳಯಬೇಕು ಎಂದರೆ ಶಿಕ್ಷಣ ಪಡೆಯಬೇಕು, ಶಿಕ್ಷಣ ಹುಲಿಯ ಹಾಲುಯಿದಂತೆ, ಅದನ್ನ ಕುಡಿದವನು ಘರ್ಜಿಸಲೇಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಹೇಳಿದರು.
ಪ್ರಾಂಶುಪಾಲರಾದ ಕುಮುದಾಕ್ಷಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜನಾರ್ಧನ್, ಶ್ರೀಮತಿ ಮಲ್ಲಿಕಾ,ನಟರಾಜ್, ಕಲಾವಿದರಾದ ಓಬಳೇಶ್ ರವರು ಉಪಸ್ಥಿತರಿದ್ದರು.
ಜೂನಿಯರ್ ವಿಷ್ಣುವರ್ಧನ್ ರವರಿಂದ ಕಲಾ ಪ್ರದರ್ಶನ ಹಾಗೂ ನೆಲಸೊಗಡು ಲಕ್ಷ್ಮಣ್, ನಂಜಪ್ಪ ರವರಿಂದ ಜಾನಪದ ಗೀತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ