November 4, 2025

ಶ್ರೀ ವಿನಾಯಕ ಸ್ವಾಮಿಯ 48ನೇ ಪ್ರತಿಷ್ಠಾಪನ ವಾರ್ಷಿಕ ಮಹೋತ್ಸವ ಆಹ್ವಾನ

ಭಕ್ತ ಮಹಾಶಯರೇ,

ಶ್ರೀ ವಿನಾಯಕಸ್ವಾಮಿಯು ಪ್ರತಿಷ್ಠಾಪನೆಗೊಂಡು 48 ವಸಂತಗಳು ತುಂಬಿರುವುದರಿಂದ ಮೂಲ ಮೂರ್ತಿ ಶ್ರೀ ವಿನಾಯಕಸ್ವಾಮಿಯ ಪುನಃ ಅಷ್ಟಬಂಧ ಕುಂಭಾಭಿಷೇಕ ಕಾರ್ಯಕ್ರಮದ ಈ ಶುಭ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಮತ್ತು ವಿಶ್ವದ ಒಳಿತಿಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ದಿನಾಂಕ: 18-05-2025 ರಿಂದ ದಿನಾಂಕ: 22-05-2025 ರವರೆಗೆ ಶ್ರೀ ಸ್ವಾಮಿಯ ಪ್ರತಿಷ್ಠಾಪನ ಮಹೋತ್ಸವ ಹಾಗೂ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ನಾಗದೇವತೆ ಗಳು ಮತ್ತು ಗಂಗಾಮಾತೆ ಹಾಗೂ ವಿಶೇಷ ಪೂಜೆ ಜಪ – ತಪ ಹೋಮ ಹವನಾದಿಗಳನ್ನು ಏರ್ಪಡಿಸಲಾಗಿದೆ. ಭಕ್ತ ಮಹಾಶಯರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಮಳೆ, ಬೆಳೆಯಾಗಲೆಂದು ಮತ್ತು ಸರ್ವ ಸಂಕಷ್ಟ ನಿವಾರಣೆಗಾಗಿ ಸರ್ವ ಭಕ್ತರೆಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸುವುದರ ಮೂಲಕ ಲೋಕದ ಒಳಿತಿಗಾಗಿ ಎಲ್ಲರೂ ಸಾಮೂಹಿಕವಾಗಿ ಶ್ರೀ ವಿನಾಯಕ ಸ್ವಾಮಿಯನ್ನು ಪ್ರಾರ್ಥಿಸುವ ಮೂಲಕ ಶ್ರೀ ಸ್ವಾಮಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಆಹ್ವಾನಿಸಲಾಗಿದೆ.

error: Content is protected !!