ಶಿರಹಟ್ಟಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸಪೇಟಿಯಲ್ಲಿ ಮಂಗಳವಾರ ೨ ನೇ ವರ್ಷದ ಸಾಧನಾ ಸಮಾವೇಶ ಮಾಡುತ್ತಿರುವದು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.ಕಾಂಗ್ರೆಸ್ ಸರ್ಕಾರದಾಲ್ಲಿ ಪ್ರತಿಯೊಂದು ಯೋಜನೆಯಲ್ಲೂ ಕಮಿಷನ್ ದಂದೆ ನಡೆಯುತ್ತಿದೆ.ಕರ್ನಾಟಕದಲ್ಲಿ ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಗೆ ಮತ್ತು ಇತರ ರಾಜ್ಯಗಳ ಚುನಾವಣೆಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ ಇದೊಂದು ಅಭಿವೃದ್ಧಿ ಶೂನ್ಯ ಸಮಾವೇಶ ಎಂದು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಶಾಸಕರ ಕಾರ್ಯಾಲಯದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ,. ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ.ಇದು ಆಡಳಿತ ನಡೆಸುವ ಸರ್ಕಾರವಲ್ಲ ಬರೀ ಜನರಿಂದ ವಸೂಲಿ ಮಾಡುವ ಸರ್ಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳು, ಕಾನೂನು ಸುವ್ಯವ್ಯಸ್ಥೆ ಹದಗೆಟ್ಟು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಮುಂಚಿತವಾಗಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಜನರಿಂದ ಮತ ಪಡೆದು ಗೃಹ ಲಕ್ಷ್ಮಿ ಕಳೆದ ಮೂರು ತಿಂಗಳುಗಳಿಂದ ಬಂದಿಲ್ಲ ಎನ್ನುವುದು ತಾಯಿಂದಿರ ಆರೋಪವಾಗಿದೆ. ಇದಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ. ಶಿವಕುಮಾರ ಅವರು ನಾವು ಮಹಿಳೆಯರಿಗೆ ಪ್ರತಿ ತಿಂಗಳು ಅವರ ಖಾತೆ ಹಣ ಹಾಕುತ್ತೇವೆ ಎಂದು ಹೇಳಿಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಹಿಂದೆ ಕೆಲವು ಸಮಾರಂಭಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳು ಪ್ರತಿತಿಂಗಳು ಮಹಿಳೆಯರಿಗೆ ೨೦೦೦ ರೂ ಹಾಕುತ್ತೇನೆ ಎಂದು ಹೇಳಿರುವ ವೀಡೀಯೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ. ಯುವನಿಧಿ ನಮ್ಮ ಕ್ಷೇತ್ರದಲ್ಲಿ ಯಾರಿಗೆ ಬಂದಿದೆ ಎನ್ನುವುದು ಇವತ್ತಿನವರೆಗೂ ಮಾಹಿತಿ ಇಲ್ಲ. ರಾಜ್ಯ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಅವರಿಗೆ ಉತ್ತರ ಕೊಡುತ್ತಾರೆ ಎಂದು ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಬಿಜೆಪಿ ನಗರ ಘಟಕ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ನಂದಾ ಪಲ್ಲೇದ, ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ಬಸವರಾಜ ವಡವಿ, ಅಕ್ಬರಸಾಬ ಯಾದಗಿರಿ, ಬಸವರಾಜ ಹಾಗೂ ಅನೇಕರು ಇದ್ದರು.
*ಬಾಕ್ಸ್*
ತಹಶೀಲ್ದಾರ ಅನೀಲ ಬಡಿಗೇರ ಭ್ರಷ್ಟಾಚಾರದಲ್ಲಿ ಭಾಗಿ ಆರೋಪ
ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದಲ್ಲಿರುವ ಇಪ್ಪತ್ತೆರಡು ಎಕರೆ ಜಮೀನನ್ನು ಯಾರದೋ ಆಸ್ತಿಯನ್ನು ಯಾರಿಗೋ ಮತ್ತೊಬ್ಬರಿಗೆ ಪರಭಾರೆ ಮಾಡಿದ್ದು ದುರದೃಷ್ಟರ ಸಂಗತಿಯಾಗಿದೆ. ಇದರಲ್ಲಿ ಶಿರಹಟ್ಟಿ ತಹಶೀಲ್ದಾರ ಅನೀಲ ಬಡಿಗೇರ ನೇರವಾಗಿ ಭಾಗಿಯಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ತಹಶೀಲ್ದಾರ ಅನೀಲ ಬಡಿಗೇರ ಅವರು ರೈತರ ಅಹವಾಲನ್ನು ಸ್ವೀಕಾರ ಮಾಡದೇ ಆಸ್ತಿಯನ್ನು ಮತ್ತೊಬ್ಬರಿಗೆ ಮಾಡಿಕೊಡುವ ವಿಚಾರಕ್ಕೆ ಕೈ ಹಾಕಿದ್ದಾರೆ. ದುಡ್ಡು ತೆಗೆದುಕೊಂಡು ಹಕ್ಕು ಬದಲಾವಣೆ ಮಾಡಿದ್ದಾರೆ. ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ